Sunday, June 7, 2026
Homeತಾಜಾ ಸುದ್ದಿನಶೆಯ ರಾಣಿಯರಿಗೆ ಸದ್ಯಕ್ಕಿಲ್ಲ ರಿಲೀಫ್: ಸೆ.24 ವರೆಗೆ ಪರಪ್ಪನ ಅಗ್ರಹಾರ ಜೈಲೂಟವೇ ಫಿಕ್ಸ್

ನಶೆಯ ರಾಣಿಯರಿಗೆ ಸದ್ಯಕ್ಕಿಲ್ಲ ರಿಲೀಫ್: ಸೆ.24 ವರೆಗೆ ಪರಪ್ಪನ ಅಗ್ರಹಾರ ಜೈಲೂಟವೇ ಫಿಕ್ಸ್

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೆ ಮುಂದೂಡಿದೆ.

ಸ್ಯಾಂಡಲ್ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ಎನ್.ಡಿ.ಪಿ.ಎಸ್. ವಿಶೇಷ ನ್ಯಾಯಾಲಯದಲ್ಲಿ ಬಂದಿದ್ದು, ಇಬ್ಬರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.24 ಕ್ಕೆ ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನ ನಟಿಯರಿಬ್ಬರೂ ಮತ್ತೆ ಮೂರು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲೇ ಕಾಲ ಕಳೆಯಬೇಕಾದ ಸ್ಥಿತಿಯಿದೆ.

- Advertisement -

Latest News

error: Content is protected !!