Friday, May 24, 2024
Homeಕರಾವಳಿಇಸ್ರೋದ ಅಡಿಷನಲ್ ಸೆಕ್ರೆಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ

ಇಸ್ರೋದ ಅಡಿಷನಲ್ ಸೆಕ್ರೆಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ

spot_img
- Advertisement -
- Advertisement -

ಸುಬ್ರಹ್ಮಣ್ಯ : ಇಸ್ರೋದ ಅಡಿಷನಲ್ ಸೆಕ್ರೆಟರಿ (ಡೈರೆಕ್ಟರ್) ಸಂಧ್ಯಾ ವೇಣುಗೋಪಾಲ್ ಶರ್ಮ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದರು.

ಶುಕ್ರವಾರ ದೇವಳಕ್ಕೆ ಭೇಟಿ ನೀಡಿದ್ದ ಅವರು ಮಧ್ಯಾಹ್ನ ಮಹಾಪೂಜೆ ವೇಳೆಯಲ್ಲಿ ಇಸ್ರೋದಿಂದ ಸೂರ್ಯ ಗ್ರಹದ ಅಧ್ಯಯನಕ್ಕಾಗಿ ಉಡಾವಣೆಯಾದ ಆದಿತ್ಯ ಎಲ್ 1 ಉಪಗ್ರಹ ಮಿಷನ್ ಯಶಸ್ವಿಯಾಗಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಅವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು.

ಬಳಿಕ ಶ್ರೀ ದೇವಳದ ಆಡಳಿತ ಕಚೇರಿಗೆ ಭೇಟಿ ನೀಡಿದ ಸಂಧ್ಯಾ.ವಿ. ಶರ್ಮ ಅವರಿಗೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಸನ್ಮಾನಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.ಅಲ್ಲದೆ ಚಂದ್ರಯಾನ 3 ಯಶಸ್ಸಿಗಾಗಿ ಶ್ರೀ ದೇವಳದಿಂದ ಅಭಿನಂದನಾ ಪತ್ರವನ್ನು ಹಸ್ತಾಂತರಿಸಿದರು.

- Advertisement -
spot_img

Latest News

error: Content is protected !!