Sunday, June 7, 2026
Homeಕರಾವಳಿಉಡುಪಿ : ಶಿರ್ವ ಮಜಲಬೆಟ್ಟು ಬೀಡುವಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿತ್ರನಟಿ ಶುಭಾ ಪೂಂಜಾ.

ಉಡುಪಿ : ಶಿರ್ವ ಮಜಲಬೆಟ್ಟು ಬೀಡುವಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿತ್ರನಟಿ ಶುಭಾ ಪೂಂಜಾ.

- Advertisement -
- Advertisement -

ಉಡುಪಿ: ಸ್ಯಾಂಡಲ್‌ವುಡ್‌ ನಟಿ, ಬಿಗ್‍ಬಾಸ್ ಖ್ಯಾತಿಯ ಶುಭಾ ಪೂಂಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ. ಆಪ್ತರು, ಸ್ನೇಹಿತರು  ಮದುವೆಯಲ್ಲಿ ಭಾಗಿಯಾಗಿದ್ದಾರೆ.  ಬಿಗ್‌ಬಾಸ್‌ ವಿನ್ನರ್‌ ಮಂಜು ಪಾವಗಡ, ಮಜಾಭಾರತ ಖ್ಯಾತಿಯ ರಾಘು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಶುಭಾ ಅವರ ಮದುವೆಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಹಲವು ವರ್ಷಗಳಿಂದ ಸಮಾಜ ಸೇವಕ ಸುಮಂತ್ ಅವರನ್ನು ಪ್ರೀತಿಸುತ್ತಿದ್ದ ಶುಭಾ, 2021 ಡಿಸೆಂಬರ್ ಅಥವಾ 2022ರ ಜನವರಿ ಮೊದಲ ವಾರದಲ್ಲಿ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು. ಸುಮಂತ್ ಅವರು ಉಡುಪಿಯಲ್ಲಿರುವುದು ಹಾಗೂ ನನ್ನ ಕುಟುಂಬಸ್ಥರು ಮಂಗಳೂರಿನಲ್ಲಿರುವ ಕಾರಣ ನಾವು ಅಲ್ಲಿಯೇ ಮದುವೆ ಆಗುತ್ತೇವೆ ಈ ಹಿಂದೆ ಶುಭಾ ಹೇಳಿದ್ದರು. ಅದರಂತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶುಭಾ, ಸುಮಂತ್ ದೀರ್ಘಕಾಲದ ಸ್ನೇಹಿತರು. ಶುಭಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಗೆಳೆಯನ ಜೊತೆಯಿರುವ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಬಿಗ್‌ಬಾಸ್‌ ಮನೆಯಲ್ಲಿಯೂ ಕೂಡಾ ತಮ್ಮ ಭಾವಿ ಪತಿಯ ಕುರಿತಾಗಿ ಹೇಳಿಕೊಂಡಿದ್ದರು. ಧರ್ಮಸ್ಥಳ, ಶಿರಸಿ  ಸೇರಿದಂತೆ ವಿವಿಧ ಕಡೆ ಪ್ರವಾಸವನ್ನು ಮಾಡಿರುವ  ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಮದುವೆ ವಿಚಾರವಾಗಿ ಹಂಚಿಕೊಂಡಿದ್ದಾರೆ.

2004ರಲ್ಲಿ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶುಭಾ, ‘ಜಾಕ್​ಪಾಟ್’ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಪ್ರವೇಶಿಸಿದರು. ‘ಚಂಡ’, ‘ಮೊಗ್ಗಿನ ಮನಸು’ ಖ್ಯಾತಿ ತಂದುಕೊಟ್ಟವು. ಮೊಗ್ಗಿನ ಮನಸು ಚಿತ್ರದ ಪಾತ್ರಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ನಟಿ ಪಡೆದಿದ್ದಾರೆ. ಇತ್ತೀಚೆಗೆ ‘ನರಗುಂದ ಬಂಡಾಯ’ ಚಿತ್ರದಲ್ಲಿ ಶುಭಾ ಬಣ್ಣಹಚ್ಚಿದ್ದರು.

- Advertisement -

Latest News

error: Content is protected !!