Friday, July 4, 2025
Homeಮನರಂಜನೆಮದುವೆಯಾಗದೇ ತಾಯಿಯಾಗುತ್ತಿದ್ದಾರೆ ಸ್ಯಾಂಡಲ್ ವುಡ್ ನಟಿ ಭಾವನಾ ರಾಮಣ್ಣ

ಮದುವೆಯಾಗದೇ ತಾಯಿಯಾಗುತ್ತಿದ್ದಾರೆ ಸ್ಯಾಂಡಲ್ ವುಡ್ ನಟಿ ಭಾವನಾ ರಾಮಣ್ಣ

spot_img
- Advertisement -
- Advertisement -

ಬೆಂಗಳೂರು: ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚಿದ್ದ ಭಾವನಾ ರಾಮಣ್ಣ ತಮ್ಮ 40ನೇ ವಯಸ್ಸಿನಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಮದುವೆಯಾಗದೇ ನಟಿ ಭಾವನಾ ರಾಮಣ್ಣ ತಾಯಿಯಾಗುತ್ತಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಅವರು ಹೇಳಿಕೊಂಡಿದ್ದಾರೆ.

ಟಿ ಭಾವನಾ ಅಮ್ಮನಾಗುತ್ತಿದ್ದಾರೆ. ಅವರೀಗ 6 ತಿಂಗಳ ಗರ್ಭಿಣಿಯಾಗಿದ್ದು ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮನೀಡಲಿದ್ದಾರೆ.. ಇದುವರೆಗೂ ಮದುವೆಯಾಗದ ಭಾವನಾ ಹೇಗೆ ಮಗು ಪಡೆದರು ಎಂದು ಆಶ್ಚರ್ಯವಾಗೋದು ನಿಜ. ಆದರೆ ಅವರು ಐವಿಎಫ್ ಮೂಲಕ ಮಗು ಪಡೆಯುತ್ತಿದ್ದಾರೆ.  ತುಂಬು ಕುಟುಂಬದಲ್ಲಿ ಬೆಳೆದ ನನಗೆ ಈವರೆಗೂ ತಾಯಿ ಆಗುವ ಬಯಕೆ ಇರಲಿಲ್ಲ. ಆದರೆ ಈಗೀಗ ತಾಯಿ ಆಗಬೇಕು ಎನ್ನುವ ಹಂಬಲ ನನ್ನ ಕಾಡುತ್ತಲೇ ಇತ್ತು. ಹೀಗಾಗಿ ಐವಿಎಫ್​ ಮೂಲಕ ಈಗ ಗರ್ಭಿಣಿಯಾಗಿದ್ದೇನೆ. ಮಕ್ಕಳ ಬಗ್ಗೆ ತುಂಬಾ ಕುತೂಹಲವಿದೆ. ಅಮ್ಮ ಆಗುವ ಉತ್ಸುಕದಲ್ಲಿದ್ದೇನೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!