Saturday, June 28, 2025
Homeಕರಾವಳಿಮಡಿಕೇರಿ ಮಹಿಳಗೆ ಕೊರೊನೊ ಪಾಸಿಟಿವ್: ಸಂಪಾಜೆ ಗೇಟ್ ನ ತಪಾಸಣೆ ಸಿಬ್ಬಂದಿಗಳಿಗೆ ಕ್ವಾರಂಟೈನ್

ಮಡಿಕೇರಿ ಮಹಿಳಗೆ ಕೊರೊನೊ ಪಾಸಿಟಿವ್: ಸಂಪಾಜೆ ಗೇಟ್ ನ ತಪಾಸಣೆ ಸಿಬ್ಬಂದಿಗಳಿಗೆ ಕ್ವಾರಂಟೈನ್

spot_img
- Advertisement -
- Advertisement -

ಸುಳ್ಯ: ಮಡಿಕೇರಿಯಲ್ಲಿ ಸೋಮವಾರ ಮಹಿಳೆಯಲ್ಲಿ ಕೊರೊನೊ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಆಕೆ ಈ ಹಿಂದೆ ಸಂಚರಿಸಿರುವ ಮಾಹಿತಿಯನ್ನು ಅನುಸರಿಸಿ ಕೊಡಗು ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ 23 ಮಂದಿಗೆ ಹೋಮ್ ಕ್ವಾರೆಂಟಿನ್ ನಲ್ಲಿರುವಂತೆ ಸೂಚಿಸಲಾಗಿದೆ.

ಮುಂಬೈನಿಂದ ಆಕೆ ಮಂಗಳೂರಿಗೆ ಬಂದು ಕಾರು ಮೂಲಕ ಸುಳ್ಯ ಮಾರ್ಗದ ಮಡಿಕೇರಿಗೆ ಹೋಗುವ ವೇಳೆ ಕೊಡಗು
ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಆಕೆಯನ್ನು ತಪಾಸಣೆಗೊಳಪಡಿಸಿದ್ದಾಗ ಜ್ವರ ಇರುವುದು ಪತ್ತೆಯಾಗಿತ್ತು. ಬಳಿಕ ಆಕೆಯನ್ನು ನೇರವಾಗಿ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಿದ್ದಾಗ ಕೊರೊನೊ ಸೋಂಕು ಇರುವುದು ಪತ್ತೆಯಾಗಿತ್ತು.

ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು,ಕಂದಾಯ ನಿರೀಕ್ಷಕರು, ಪಂಚಾಯತ್ ಸಿಬ್ಬಂದಿ ಸೇರಿ 10 ಮಂದಿ ಪೊಲೀಸರು ಸೇರಿ 23 ಮಂದಿಯನ್ನು ಮಡಿಕೇರಿಯಲ್ಲಿ ಕ್ವಾರಂಟೈನ್ ಇರಿಸಲಾಗಿದೆ.

- Advertisement -
spot_img

Latest News

error: Content is protected !!