Wednesday, June 3, 2026
Homeಕರಾವಳಿಮಂಗಳೂರುಸುಬ್ರಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಜನರಲ್ ಪವರ್ ಆಫ್ ಅಟಾರ್ನಿ ಎಸ್. ಆರ್  ಪ್ರಸನ್ನ ...

ಸುಬ್ರಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಜನರಲ್ ಪವರ್ ಆಫ್ ಅಟಾರ್ನಿ ಎಸ್. ಆರ್  ಪ್ರಸನ್ನ  ರೈಲಿನಿಂದ ಬಿದ್ದು ಸಾವು

- Advertisement -
- Advertisement -

ಮೈಸೂರು;  ಕುಕ್ಕೆ ಸುಬ್ರಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಜಿ.ಪಿ.ಎ. ಹೋಲ್ಡರ್ (ಜನರಲ್ ಪವರ್ ಆಫ್ ಅಟಾರ್ನಿ) ಎಸ್. ಆರ್  ಪ್ರಸನ್ನ(63)  ರೈಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ರೈಲು ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿ ಘಟನೆ ನಡೆದಿದೆ.  ಪ್ರಸನ್ನ ಅವರು ಮಠದ  ಕೆಲಸ ಮುಗಿಸಿ    ಬುಧವಾರ ರಾತ್ರಿ ನೆಟ್ಟಣದ ರೈಲು ನಿಲ್ದಾಣದಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ  ತನ್ನ ಮನೆಗೆ ಹೋಗಲು  ರೈಲು ಏರಿದ್ದರು.  ಬೆಳಿಗ್ಗೆಯಾದರೂ ಮನೆಗೆ ತಲುಪದ ಹಿನ್ನೆಲೆ ಕುಟುಂಬಸ್ಥರು ಮತ್ತು ಮಠದ ಸಿಬ್ಬಂದಿ ಬಳಿ ಕರೆ ಮಾಡಿ ವಿಚಾರಿಸಿದ್ದಾರೆ ಅವರ ಪೋನ್ ಸಂಖ್ಯೆಗೆ ಸಂಪರ್ಕ ಮಾಡಿದಾಗ ಪೋನ್ ರಿಂಗ್ ಆಗುತ್ತಿದ್ದರೂ ಸ್ವೀಕರಿಸುತ್ತಿರಲಿಲ್ಲ. ಕೆಲ ಹೊತ್ತಿನ ಬಳಿಕ  ಯಾರೋ ಬೇರೆಯವರು ಪೋನ್ ಸ್ವೀಕರಿಸಿ ಘಟನೆ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ .

- Advertisement -

Latest News

error: Content is protected !!