Friday, May 3, 2024
Homeತಾಜಾ ಸುದ್ದಿಖಾಸಗಿ ಶಾಲೆಗಳಿಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪ್ರಕಟಿಸಿದ ರುಪ್ಸಾ; ಈ ಮಾರ್ಗಸೂಚಿಯಲ್ಲಿ ಏನೇನಿದೆ?

ಖಾಸಗಿ ಶಾಲೆಗಳಿಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪ್ರಕಟಿಸಿದ ರುಪ್ಸಾ; ಈ ಮಾರ್ಗಸೂಚಿಯಲ್ಲಿ ಏನೇನಿದೆ?

spot_img
- Advertisement -
- Advertisement -

ಬೆಂಗಳೂರು: ಚೀನಾದಲ್ಲಿ ಕೋವಿಡ್ ಹೆಚ್ಚಳವಾದ ಕಾರಣ, ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದೆ.. ಈ ಬೆನ್ನಲ್ಲೇ ರುಪ್ಸಾ ಸಂಘಟನೆ ವ್ಯಾಪ್ತಿಯಲ್ಲಿ ಬರುವಂತ ಖಾಸಗೀ ಶಾಲೆಗಳಿಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ.

ಇಂದು ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳಿಗೆ ರುಪ್ಸಾ ಸಂಘಟನೆಯಿಂದ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಶಾಲೆಗ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ತಿಳಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ನೆಗಡಿ, ಕೆಮ್ಮು, ಜ್ವರವು ಕಂಡು ಬಂದರೇ ಅವರಿಗೆ ರಜೆ ನೀಡುವಂತೆ ತಿಳಿಸಿದೆ.

ಇನ್ನೂ ನೆಗಡಿ, ಕೆಮ್ಮು, ಜ್ವರದ ಲಕ್ಷಣ ಕಂಡು ಬಂದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಕೂಡಲೇ ಪೋಷಕರಿಗೆ ಮಾಹಿತಿ ನೀಡಬೇಕು. ಶಾಲಾ ಆವರಣದಲ್ಲಿ ದಿನ ಬಿಟ್ಟು ದಿನ ಸ್ಯಾನಿಟೈಸ್ ಮಾಡಬೇಕು. ಮಕ್ಕಳು ಗುಂಪು ಗೂಡುವುದನ್ನು ನಿಯಂತ್ರಿಸಬೇಕು. ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂಬುದಾಗಿ ಹೇಳಲಾಗಿದೆ. ಇದಷ್ಟೇ ಅಲ್ಲದೇ ಶಾಲೆಯಲ್ಲಿ ಮಕ್ಕಳು ನೀರು ಹಂಚಿಕೊಳ್ಳುವುದು, ಆಹಾರ ಹಂಚಿಕೊಳ್ಳದಂತೆ ಸೂಚಿಸಬೇಕು. ಈ ನಿಯಮಗಳನ್ನು ನಾಳೆಯಿಂದಲೇ ಜಾರಿಗೆ ಬರುವಂತೆ ಪಾಲಿಸಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!