Sunday, June 29, 2025
Homeಕರಾವಳಿಮಂಗಳೂರು: ವಾಹನ ಚಾಲನೆ ವೇಳೆ ಗುಟ್ಕಾ ಜಗಿದ ಚಾಲಕರಿಗೆ 5 ಸಾವಿರ ದಂಡ ಹಾಕಿದ ಆರ್...

ಮಂಗಳೂರು: ವಾಹನ ಚಾಲನೆ ವೇಳೆ ಗುಟ್ಕಾ ಜಗಿದ ಚಾಲಕರಿಗೆ 5 ಸಾವಿರ ದಂಡ ಹಾಕಿದ ಆರ್ ಟಿ ಓ ಅಧಿಕಾರಿಗಳು

spot_img
- Advertisement -
- Advertisement -

ಮಂಗಳೂರು: ವಾಹನ ಚಾಲನೆ ವೇಳೆ ಗುಟ್ಕಾ ಜಗಿಯುತ್ತಿದ್ದ ಬಸ್‌ ಚಾಲಕರಿಗೆ‌ ಮಂಗಳೂರು ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಬಿಜೈ ಬಳಿ ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು ಗುಟ್ಕಾ ಜಗಿಯುತ್ತ ಅಧಿಕಾರಿಗಳ ಮುಂದೆ ಬಂದಿದ್ದಾರೆ. ಇದನ್ನು ಗಮನಿಸಿದ ಅಧಿಕಾರಿಗಳ ಇಬ್ಬರಿಗೂ ತಲಾ 5000 ರೂಪಾಯಿ ದಂಡ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಟಿಒ ಆರ್‌.ಎಂ. ವರ್ಣೇಕರ್‌, “ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಿ ಚಲಾಯಿಸುವವರ ವಿರುದ್ಧ ಕೂಡ ಪ್ರಕರಣ ದಾಖಲಿಸಿ, ದಂಡ ವಿಧಿಸಲು ಅವಕಾಶವಿದೆ. ಅದರಂತೆ ದಂಡ ವಿಧಿಸಲಾಗಿದೆ’ ಎಂದಿದ್ಗಾರೆ.

- Advertisement -
spot_img

Latest News

error: Content is protected !!