Thursday, June 4, 2026
Homeಕರಾವಳಿಮಂಗಳೂರು: ಸೋಮೇಶ್ವರ ಪಿಲಾರಿನಲ್ಲಿ ನೀರಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಪ್ರಕರಣ; ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ...

ಮಂಗಳೂರು: ಸೋಮೇಶ್ವರ ಪಿಲಾರಿನಲ್ಲಿ ನೀರಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಪ್ರಕರಣ; ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಪರಿಹಾರ ವಿತರಣೆ.

- Advertisement -
- Advertisement -

ಮಂಗಳೂರು: ಸೋಮೇಶ್ವರ ಪಿಲಾರಿನಲ್ಲಿ ನೀರಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತರ ಕುಟುಂಬಸ್ಥರಿಗೆ ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಮನೆ ಸಮೀಪ ಕಾಲು ಸಂಕ ದಾಟುವ ವೇಳೆ ಆಯತಪ್ಪಿ ಬಿದ್ದು ಸೋಮೇಶ್ವರ ಪಿಲಾರು ಬಳಿಯ ಸುರೇಶ್ ಗಟ್ಟಿ (52) ಮೃತಪಟ್ಟಿದ್ದರು.

ಈ ಹಿನ್ನೆಲೆ  ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ್ ಖರ್ಜುರೆ ಭೇಟಿ ನೀಡಿ ಪರಿಹಾರ ಧನವನ್ನು ಖಜಾನೆ 2 ಮುಖೇನ  ಪತ್ನಿ ಶಾಂಭ ಅವರಿಗೆ ನೀಡಿದ್ದಾರೆ. ಸುರೇಶ್ ಗಟ್ಟಿ ಅವರು ಕಾಲು ಸಂಕದ ಆಯತಪ್ಪಿ  ನೀರಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದರು.

- Advertisement -

Latest News

error: Content is protected !!