Sunday, June 7, 2026
Homeಕರಾವಳಿಮಂಗಳೂರಿನಲ್ಲಿ ಮಧ್ಯರಾತ್ರಿ ರೌಡಿ ಶೀಟರ್ ಬರ್ಬರ ಹತ್ಯೆ

ಮಂಗಳೂರಿನಲ್ಲಿ ಮಧ್ಯರಾತ್ರಿ ರೌಡಿ ಶೀಟರ್ ಬರ್ಬರ ಹತ್ಯೆ

- Advertisement -
- Advertisement -

ಮಂಗಳೂರು ಇಲ್ಲಿನ ಬೊಕ್ಕಪಟ್ಟಣದ ಕರ್ನಲ್  ಗಾರ್ಡನ್ ನಲ್ಲಿ ರೌಡಿ ಶೀಟರ್  ಇಂದ್ರಜೀತ್ (45) ಎಂಬಾತನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈತ ಪಾಂಡೇಶ್ವರ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಮಧ್ಯರಾತ್ರಿಯಿಂದ ಇಂದು ನಸುಕಿನ ಜಾವದೊಳಗೆ ಇಂದ್ರಜೀತ್ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ನಿನ್ನೆ ಇಂದ್ರಜೀತ್ ಮೆಹಂದಿ ಸಮಾರಂಭವೊದಂರಲ್ಲಿ ಭಾಗಿಯಾಗಿದ್ದ, ಅಲ್ಲಿ  ಯಾವುದೋ ವಿಚಾರಕ್ಕೆ ಜಗಳವಾಗಿತ್ತು. ಇದೇ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಇಂದ್ರಜೀತ್ ನನ್ನು  ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿ ಗಾರ್ಡನ್ ಒಳಗಡೆ ಎಸೆದಿದ್ದಾರೆ. ಬೆಳಗ್ಗೆ 6 ಗಂಟೆ ವೇಳೆ ಗಾರ್ಡನ್ ಗೆ ಬಂದಾಗ ಸ್ಥಳೀಯರಿಗೆ ವಿಚಾರ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬರ್ಕೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ,

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಲವು ತಿಂಗಳಿಂದ ಒಬ್ಬರ ಹಿಂದೆ ಒಬ್ಬರಂತೆ ರೌಡಿಶೀಟರ್ ಗಳ ಹತ್ಯೆ ಹಾಗೂ ಹತ್ಯೆ ಯತ್ನಗಳೂ ನಡೆಯುತ್ತಿರೋದು ಜಿಲ್ಲೆಯ ಜನರ ಆತಂತಕ್ಕೆ ಕಾರಣವಾಗಿದೆ.

- Advertisement -

Latest News

error: Content is protected !!