Sunday, June 7, 2026
Homeಕರಾವಳಿಬೆಂಗಳೂರಿನಲ್ಲಿ ಬೆಳ್ತಂಗಡಿ ಮೂಲದ ಮೀನು ವ್ಯಾಪಾರಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ ಪುಡಿರೌಡಿ

ಬೆಂಗಳೂರಿನಲ್ಲಿ ಬೆಳ್ತಂಗಡಿ ಮೂಲದ ಮೀನು ವ್ಯಾಪಾರಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ ಪುಡಿರೌಡಿ

- Advertisement -
- Advertisement -

ಬೆಂಗಳೂರು:ಇತ್ತೀಚೆಗೆ ಉಡುಪಿ ಮೂಲಕ ಯುವಕ ಬೇಕರಿಗೆ ನುಗ್ಗಿ ಪುಡಿ ರೌಡಿಗಳು ಹಲ್ಲೆ ನಡೆಸಿದ ಬೆನ್ನಲ್ಲೇ ಮತ್ತೊಂದು ಇಂತಹದ್ದೇ ಘಟನೆ ನಡೆದಿದೆ. ಹಫ್ತಾ ನೀಡದ ಕಾರಣ ಬೆಳ್ತಂಗಡಿ ಮೂಲದ ಮೀನಿನ ವ್ಯಾಪಾರಿಯ ಮೇಲೆ ಲಾಂಗ್ ಬೀಸಿ ರೌಡಿ ದಾಂಧಲೆ ನಡೆಸಿ ಅಟ್ಟಹಾಸ ಮೆರೆದಿದ್ದಾನೆ.

ಘಟನೆಯ ಕುರಿತ ವಿಡಿಯೋ‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಬಾಣಸವಾಡಿಯ ಜೈಭಾರತ್ ನಗರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಸುರೇಶ್ ಎಂಬ ಪುಡಿರೌಡಿ ಬೆಳ್ತಂಗಡಿಯ‌ ಮನೋಜ್ ಎಂಬವರ ಮೀನಿನ ಅಂಗಡಿಗೆ ತೆರಳಿ ಹಫ್ತಾ ಕೇಳಿದ್ದಾನೆ. ಕೊಡದಿದ್ದಾಗ ನಿಂದಿಸಿ ವಾಹನಗಳನ್ನು ತಳ್ಳಿಹಾಕಿ ದಾಂಧಲೆ ಮಾಡಿ ಹೋಗಿದ್ದಾನೆ. ಬಳಿಕ ರಾತ್ರಿಯ ವೇಳೆ ಬಂದು ಲಾಂಗ್ ಹಿಡಿದುಕೊಂಡು ಬಂದು ದಾಳಿ ನಡೆಸಿದ್ದಾನೆ. ಅಂಗಡಿ ಮಾಲೀಕ‌ ಮನೋಜ್ ‌ಮೇಲೆ‌ ಮಾರಕಾಸ್ತ್ರವನ್ನು ಬೀಸಿ ರಂಪಾಟ ನಡೆಸಿದ್ದಾನೆ.ಘಟನೆಯ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!