Wednesday, July 15, 2026
Homeಕರಾವಳಿಬಂಟ್ವಾಳ: ಟ್ಯಾಂಕರ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ ಪ್ರಕರಣ:  ಗಂಭೀರ ಗಾಯಗೊಂಡಿದ್ದ ಮಡಂತ್ಯಾರ್ ಕೀರ್ತಿ...

ಬಂಟ್ವಾಳ: ಟ್ಯಾಂಕರ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ ಪ್ರಕರಣ:  ಗಂಭೀರ ಗಾಯಗೊಂಡಿದ್ದ ಮಡಂತ್ಯಾರ್ ಕೀರ್ತಿ ಕ್ಯಾಟರಿಂಗ್ ಮಾಲೀಕ ರೋಷನ್ ಸಾವು

- Advertisement -
- Advertisement -

ಬಂಟ್ವಾಳ: ಇಲ್ಲಿನ ಮಣಿಹಳ್ಳ ಎಂಬಲ್ಲಿ ಟ್ಯಾಂಕರ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಮಂಡತ್ಯಾರ್ ಕೀರ್ತಿ ಕ್ಯಾಟರಿಂಗ್ ಮಾಲೀಕ ರೋಷನ್(37) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮೃತ ರೋಷನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ,

ಮಂಗಳೂರು ಕಡೆ ಹೋಗುತ್ತಿದ್ದ ಟ್ಯಾಂಕರ್ ಮತ್ತು ಮಂಗಳೂರಿನಿಂದ ಮಂಡತ್ಯಾರ್ ಕಡೆ ಬರುತ್ತಿದ್ದ ಎಕ್ಸ್ ಪ್ರೆಸೋ ಕಾರು ನಡುವೆ ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಾರು ಚಾಲಕ ಮಂಡತ್ಯಾರ್ ಕೀರ್ತಿ ಕ್ಯಾಟರಿಂಗ್ ಮಾಲೀಕ ರೋಷನ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!