Wednesday, October 14, 2026
Homeಕರಾವಳಿಸರ್ಕಾರದ ಮುಖ್ಯ ಕಾರ್ಯದರ್ಶಿ ​ವಂದಿತಾ ಶರ್ಮಾ ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಿದ ಡಿ...

ಸರ್ಕಾರದ ಮುಖ್ಯ ಕಾರ್ಯದರ್ಶಿ ​ವಂದಿತಾ ಶರ್ಮಾ ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಿದ ಡಿ ರೂಪ

- Advertisement -
- Advertisement -

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ​ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಡಿ ರೂಪ ಅವರು ಕೂಡ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಿದ್ದಾರೆ.

ವಿಧಾನಸೌಧಲ್ಲಿರುವ ಸಿಎಸ್‌ ಕಚೇರಿಯಲ್ಲಿ ದೂರು ಸಲ್ಲಿಸಿದ್ದಾರೆ. ದಾಖಲೆ ಸಮೇತ ಸಿಎಸ್‌ ಗೆ ಡಿ.ರೂಪಾ ದೂರು ನೀಡಿದ್ದಾರೆ. ಲಕ್ಷಾಂತರ ರೂಪಾಯಿ ಸುಂಕ ತಪ್ಪಿಸಿದ ಆರೋಪದಡಿಯಲ್ಲಿ ದೂರು ನೀಡಲಾಗಿದೆ.
ನಂತರ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ನನ್ನ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಾನು ಹೇಳಿದ ಬಗ್ಗೆ ರೋಹಿಣಿ ಯಾವುದು ಸ್ಪಷ್ಟನೆ ನೀಡಿಲ್ಲ ಎಂದು ಡಿ.ರೂಪಾ ಹೇಳಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ಈಗಾಗಲೇ ತನಿಖೆ ನಡೆದಿದೆ. ಸಿಂಧೂರಿ ವಿರುದ್ಧ ಆರೋಪ ಸಾಬೀತಾಗಿದೆ. ಆದಾಯ ಮೀರದ ಆಸ್ತಿಗಳಿಕೆ ಬಗ್ಗೆ ಆರೋಪ ಸಾಬೀತಾಗಿದೆ. ಇಟಾಲಿಯನ್‌, ಪೀಠೋಪಕರಣ , ಜರ್ಮನ್‌ ಪೀಠೋಪಕರಣ ಖರೀದಿಸಿದ್ದಾರೆ. ಮೈಸೂರಿನಲ್ಲಿ ಡಿಸಿ ಆಗಿದ್ದಾಗ ಪೀಠೋಪಕರಣ ಕೊಂಡೊಯ್ದಿದ್ದರು. ಸರ್ವಿಸ್‌ ಕಂಡಕ್ಟ್‌ ರೂಲ್ಸ್‌ ಉಲ್ಲಂಘಿಸಿ ಖಾಸಗಿ ಫೋಟೋ ಕಳಿಸಿದ್ದರು ಎಂದು ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಆರೋಪ ಮಾಡಿದ್ದಾರೆ.

- Advertisement -

Latest News

error: Content is protected !!