Wednesday, June 24, 2026
Homeಉತ್ತರ ಕನ್ನಡಗುಡ್ಡದಿಂದ ಜಾರಿದ ಬಂಡೆ ಬಿದ್ದಿದ್ದು ಮನೆಯ ಮುಂದೆ!

ಗುಡ್ಡದಿಂದ ಜಾರಿದ ಬಂಡೆ ಬಿದ್ದಿದ್ದು ಮನೆಯ ಮುಂದೆ!

- Advertisement -
- Advertisement -

ಕಾರವಾರ: ಭಾರೀ ಮಳೆಗೆ ಗುಡ್ಡ ಕುಸಿದು ಗುಡ್ಡದ ಮೇಲಿದ್ದ ಬಂಡೆಯೊಂದು ಜಾರಿ ಕೆಳಗಿರುವ ಮನೆಯೊಂದರ ಅಂಗಳಕ್ಕೆ ಬಂದು ಬಿದ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ನಡೆದಿದೆ. ಬಂಡೆ ಜಾರಿ ಬಿದ್ದು ದೊಡ್ಡ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಕಾವೂರಿನ ಸುರೇಶ್ ಗೌಡ ಎಂಬವರ ಮನೆಯ ಸಮೀಪದಲ್ಲೇ ಇರುವ ಗುಡ್ಡ ಮಳೆಯಿಂದಾಗಿ ಕುಸಿದಿದೆ. ಇದರ ಪರಿಣಾಮವಾಗಿ ಮೇಲಿದ್ದ ಬಂಡೆ ಉರುಳಿ ಸುರೇಶ್ ಗೌಡ ಅವರ ಮನೆಯಂಗಳಕ್ಕೆ ಬಂದು ಬಿದ್ದಿದೆ.

ಅದೃಷ್ಟವಶಾತ್ ಅನಾಹುತ ಏನೂ ಸಂಭವಿಸದ ಕಾರಣ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.‌ ಈ ಗುಡ್ಡದ ಮೇಲಿನ ಪ್ರದೇಶದಲ್ಲಿ ಸರ್ಕಾರಿ ಶಾಲೆಯೊಂದಿದ್ದು ಶಾಲೆಗೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಕಳೆದ ವರ್ಷ ಕೂಡಾ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು.

- Advertisement -

Latest News

error: Content is protected !!