Monday, June 8, 2026
Homeಅಪರಾಧವೇಣೂರು: ಪೇಟೆಯಲ್ಲಿ ಮಲಗಿದ್ದ ಜಾನುವಾರುಗಳ ಕಳವು!

ವೇಣೂರು: ಪೇಟೆಯಲ್ಲಿ ಮಲಗಿದ್ದ ಜಾನುವಾರುಗಳ ಕಳವು!

- Advertisement -
- Advertisement -

ವೇಣೂರು :ನಾರಾವಿ ಪೇಟೆಯಲ್ಲಿ ಮಲಗಿದ್ದ ಜಾನುವಾರುಗಳನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋದ ಘಟನೆ ನಾರವಿಯಲ್ಲಿ ನಡೆದಿದೆ.

ವೇಣೂರು ಪೊಲೀಸ್ ಠಾಣೆ ಉಪ ನಿರೀಕ್ಷಕರು ತಮ್ಮ ಸಿಬ್ಬಂದಿಯವರ ಜೊತೆ ನಾರಾವಿಯ ಅಂಗಡಿಗೆ ಅಳವಡಿಸಿದ ಸಿಸಿ ಟಿವಿ ಯನ್ನು ಪರಿಶೀಲಿಸಿದಾಗ ರವಿವಾರದಂದು ರಾತ್ರಿ 01.35 ಗಂಟೆಯಿಂದ 01.55 ಗಂಟೆಯ ಮದ್ಯ ಕಾಲದಲ್ಲಿ ಯಾರೋ 4 ಜನ ಅಪರಿಚಿತರು ಬಿಳಿ ಬಣ್ಣದ ರಿಡ್ಜ್ ಕಾರಿನಲ್ಲಿ ಬಂದು ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ನಾರಾವಿ ಪೇಟೆಯಲ್ಲಿ ಮಲಗಿದ್ದ ಜಾನುವಾರಗಳನ್ನು ಹಿಡಿದು ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ಹಾಕಿಕೊಂಡು ಹೋಗುವುದು ಕಂಡು ಬಂದಿದೆ.

379 ಐಪಿಸಿ ಮತ್ತು ಕಲಂ 5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಮತ್ತು ಸಂರಕ್ಷಣಾ ಕಾಯ್ದೆ 2020 ಯಂತೆ ಕರು ವೇಣೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!