ಮಂಗಳೂರು : ನಗರದ ಮಣ್ಣಗುಡ್ಡ ಆಶೀರ್ವಾದ್ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಭೋಜಪ್ಪ ಎಂಬವರನ್ನು ಸೆ. 28ರಂದು ಚಿಲಿಂಬಿ ಬಳಿ ತಡೆದು 4.20 ಲಕ್ಷ ರೂ. ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಂಬಂಧ ಊರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ಪೊಲೀಸ್ ಆಯುಕ್ತರು ರಚಿಸಿದ್ದರು. ಆರೋಪಿಗಳ ಜಾಡನ್ನು ಹತ್ತಿದ ಪೊಲೀಸರು, ಭೋಜಪ್ಪನವರ ಪೆಟ್ರೋಲ್ ಪಂಪ್ ನಲ್ಲೇ ಕೆಲಸ ಮಾಡುತ್ತಿದ್ದ ಶ್ಯಾಮ್ ಶಂಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಶ್ಯಾಮ್ ಶಂಕರ್ ನ ಮಾಹಿತಿಯಂತೆ ಇತರೆ ಆರೋಪಿಗಳಾದ ಅಭಿಷೇಕ್,ಕಾರ್ತಿಕ್ ಹಾಗೂ ಸಾಗರ್ ನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು 26ರಿಂದ 32 ವಯಸ್ಸಿನವರಾಗಿದ್ದು, ಬಂಧಿತರಿಂದ ದರೋಡೆಗೈದ ಹಣದಲ್ಲಿ 60,000 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ಆರೋಪಿಗಳಲ್ಲಿ ಅಭಿಷೇಕ್, ಕಾರ್ತಿಕ್ ಈ ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾದವರು