Thursday, June 4, 2026
Homeಕರಾವಳಿಹೆದ್ದಾರಿ ಸಚಿವರಿಗೆ ರೋಡ್‌ ಚಾಲೆಂಜ್‌ ಕೊಟ್ರು ಮಿಥುನ್‌ ರೈ!..

ಹೆದ್ದಾರಿ ಸಚಿವರಿಗೆ ರೋಡ್‌ ಚಾಲೆಂಜ್‌ ಕೊಟ್ರು ಮಿಥುನ್‌ ರೈ!..

- Advertisement -
- Advertisement -

ಮಂಗಳೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75 ಮತ್ತು ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಸಂಪೂರ್ಣಹದಗೆಟ್ಟಿದೆ. ಗುಂಡಿಗಳಿಂದ ಕೂಡಿದ ರಸ್ತೆಯ ಫೋಟೋವನ್ನು ಹಾಕಿದ್ದ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಅವರು ಎರಡು ಮೂರು ದಿನಗಳ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ರೋಡ್‌ ಚಾಲೆಂಜ್‌ ಒಡ್ಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಚಾಲೆಂಜ್ಗಳು ಸದ್ದು ಮಾಡುತ್ತಿರುವಾಗಲೇ ಈ ರೋಡ್‌ ಚಾಲೆಂಜ್‌ ಭಾರೀ ವೈರಲ್‌ ಆಗಿದೆ. “ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ಸಂಚಾರ ಮಾಡುವುದೇ ತೀರಾ ಕಷ್ಟವಾಗಿದೆ. , ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣದ ಸಮಯ ಆರರಿಂದ ಏಳು ಗಂಟೆಗಳಿರುತ್ತದೆ. ಆದರೆ ಈಗ ಇದು ಒಂಬತ್ತರಿಂದ ಹತ್ತು ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಕುಲಶೇಖರ ಮತ್ತು ವಾಮಂಜೂರು ನಡುವಿನ ರಸ್ತೆಗಳಲ್ಲಿ ದಿನನಿತ್ಯವು ಅಪಘಾತಗಳು ನಡೆಯುತ್ತದೆ” ಎಂದು ಅವರು ಚಾಲೆಂಜ್ ನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!