Sunday, June 7, 2026
Homeಕರಾವಳಿಕತಾರ್ ನಲ್ಲಿ ಭೀಕರ ರಸ್ತೆ ಅಪಘಾತ; ಬಂಟ್ವಾಳದ ಯುವಕ ಸಾವು

ಕತಾರ್ ನಲ್ಲಿ ಭೀಕರ ರಸ್ತೆ ಅಪಘಾತ; ಬಂಟ್ವಾಳದ ಯುವಕ ಸಾವು

- Advertisement -
- Advertisement -

ಬಂಟ್ವಾಳ: ಕತಾರ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲಿನ ಯುವಕ ಫಹದ್ ಮೃತಪಟ್ಟಿದ್ದಾರೆ.
ಈ ಹಿಂದೆ ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸಿದ್ದ ಫಹದ್ ಕೊರೋನಾ ಕಾರಣದಿಂದ ಊರಿಗೆ ಬಂದು ಒಂದು ವರ್ಷ ಕಾಲ ಊರಿನಲ್ಲೇ ಚಾಲಕ ವೃತ್ತಿ ಮಾಡುತ್ತಿದ್ದರು. ಬಳಿಕ ಕಳೆದ ಐದು ತಿಂಗಳ ಹಿಂದೆ ಕತಾರಿಗೆ ತೆರಳಿದ್ದರು. ಮಂಗಳವಾರ ರಾತ್ರಿ ಅಪಘಾತ ನಡೆಯುವ ಸ್ವಲ್ಪ ಮುಂಚೆಯಷ್ಟೆ ದೂರವಾಣಿ ಕರೆ ಮಾಡಿ ಮನೆ ಮಂದಿ ಜೊತೆ ಮಾತನಾಡಿದ್ದರು.

ಆ ಬಳಿಕ ಅಪಘಾತದ ಸುದ್ದಿ ಕೇಳಿ ಮನೆ ಮಂದಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಫಹದ್ ಅವರ ತಂದೆಯೂ ಟಿಪ್ಪರ್ ಚಾಲಕನಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಫಹದ್ ತಂದೆ , ತಾಯಿ ಹಾಗೂ ತಮ್ಮನನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!