Wednesday, June 3, 2026
Homeಕರಾವಳಿಪುತ್ತೂರು: ರಸ್ತೆ ಬದಿಯ ಬಾವಿ ಕಟ್ಟೆಗೆ ಡಿಕ್ಕಿ ಹೊಡೆದ ಲಾರಿ

ಪುತ್ತೂರು: ರಸ್ತೆ ಬದಿಯ ಬಾವಿ ಕಟ್ಟೆಗೆ ಡಿಕ್ಕಿ ಹೊಡೆದ ಲಾರಿ

- Advertisement -
- Advertisement -

ಪುತ್ತೂರು: ರಸ್ತೆಯ ಬಳಿ ಇದ್ದ ಬಾವಿಯ ಕಟ್ಟೆಗೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಕಮಲೆ ಅಟಲ್ ನಗರ ಎಂಬಲ್ಲಿ ನಡೆದಿದೆ.

ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ ಶೇಕಮಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಇದ್ದ ಬಾವಿಯ ಕಟ್ಟೆಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಬಾವಿಯ ಕಟ್ಟೆ ಒಡೆದು ಹೋಗಿ, ಕಾಂಕ್ರೀಟ್ ಸ್ಲ್ಯಾಬ್ ನೆಲಸಮವಾಗಿದೆ.

ಘಟನೆಯಲ್ಲಿ ಬಾವಿಯ ಕಟ್ಟೆ ಒಡೆದು ಲಾರಿ ಬಾವಿಯ ಒಳಗೆ ಬೀಳುವ ಸಂಭವವಿತ್ತು. ಆದರೆ ಅದೃಷ್ಟವಶಾತ್ ಲಾರಿಯ ಪ್ಲೇಟ್ ತುಂಡಾಗಿ ಬಾವಿಯ ಕಟ್ಟೆಯ ಕಲ್ಲೊಂದಿಗೆ ಸಿಲುಕಿಕೊಂಡಿರುವುದರಿಂದ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!