- Advertisement -
- Advertisement -
ಮಡಿಕೇರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೂಡಿಗೆ ಕ್ರೀಡಾ ಪ್ರೌಡಶಾಲೆಯಲ್ಲಿ ತರಬೇತುದಾರರಾದ ಶ್ರೀ ವೆಂಕಟೇಶ್. ಬಿ.ಎಸ್. ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ, ಹತ್ತನೇ ತರಗತಿ ವಿದ್ಯಾರ್ಥಿ ರಿಷಿ ಕುಶಾಲಪ್ಪ ಮಾರ್ಚ್ ತಿಂಗಳ ಅಂತ್ಯದಲ್ಲಿ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಹಾಕಿ ಪಂದ್ಯಾಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ರಿಷಿ ಕುಶಾಲಪ್ಪ ಕಾರ್ಗುಂದ ಗ್ರಾಮದ ಜತ್ತಣನ ದಿನೇಶ್ ಮತ್ತು ಶೊಭ ದಂಪತಿಗಳ ಪುತ್ರ ಹಾಗೂ ಎಂ.ಇ.ಜಿ. ಯ ಆ ದಿನಗಳಲ್ಲಿ ಉತ್ತಮ ಹಾಕಿ ಕ್ರೀಡಾಪಟುವಾಗಿದ್ದ ಕುರಿಕಡ ಆನಂದ ಅವರ ಮೊಮ್ಮಗ ಕೂಡ ಆಗಿದ್ದಾನೆ. ರಿಷಿ ಕುಶಲಪ್ಪ ರಾಷ್ಟ್ರ ಮಟ್ಟಕ್ಕೆ ಅಯ್ಕೆ ಯಾಗುವ ಮೂಲಕ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
- Advertisement -