Tuesday, September 10, 2024
Homeಕರಾವಳಿಕುಕ್ಕೆ ಸುಬ್ರಹ್ಮಣ್ಯದ ಪರಮ ಭಕ್ತರಾಗಿದ್ದಾರು ದಿವಂಗತ ನಟ ರಿಷಿ ಕಪೂರ್ !

ಕುಕ್ಕೆ ಸುಬ್ರಹ್ಮಣ್ಯದ ಪರಮ ಭಕ್ತರಾಗಿದ್ದಾರು ದಿವಂಗತ ನಟ ರಿಷಿ ಕಪೂರ್ !

spot_img
- Advertisement -
- Advertisement -

ಸುಬ್ರಹ್ಮಣ್ಯ: ಕೆಲ ದಿನಗಳ ಹಿಂದಷ್ಟೇ ನಿಧನರಾದ ಹಿಂದಿ ಚಲನಚಿತ್ರ ರಂಗದ ಖ್ಯಾತ ನಟ ರಿಷಿ ಕಪೂರ್ ತುಳುನಾಡಿನ ಐತಿಹಾಸಿಕ ಮತ್ತು ಪುಣ್ಯ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ 2003ರಲ್ಲಿ ಆಗಮಿಸಿ ಸರ್ಪಸಂಸ್ಕಾರ ಮಾಡಿಸಿದ್ದರು.

ರಿಷಿ ಕಪೂರ್ ಕುಟುಂಬ 2003 ರ ಸೆಪ್ಟೆಂಬರ್ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ, ಕ್ಷೇತ್ರದಲ್ಲಿ ನಡೆಯುವ ವಿಶೇಷ ಸೇವೆಯಾದ ಸರ್ಪಸಂಸ್ಕಾರ ಪೂಜಾ ಕಾರ್ಯವನ್ನು ನೆರವೇರಿಸಿತ್ತು.

ರಾಜ್​ಕಪೂರ್, ಅವರ ಪತ್ನಿ ಕೃಷ್ಣಾ ಕಪೂರ್, ಮಕ್ಕಳಾದ ರಣಧೀರ್ ಕಪೂರ್, ರಿಷಿ ಕಪೂರ್, ರಾಜೀವ್ ಕಪೂರ್, ರಿಷಿಯ ಪತ್ನಿ ನಟಿ ನೀತೂ ಕಪೂರ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದರು.

ಸುಬ್ರಹ್ಮಣ್ಯದಲ್ಲಿ ಖಾಸಗಿ ವಸತಿಗೃಹದ ಮಾಲಿಕರಾದ ವಿ ಎಸ್ ನಾಯಕ್ ಅವರು ಈ ಸಿನಿಮಾ ತಾರೆಗಳನ್ನು ಸುಬ್ರಹ್ಮಣ್ಯಕ್ಕೆ ಕರೆತಂದಿದ್ದರು. ಈ ಸಮಯದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ನಡೆಸಿದ ರಿಷಿ ಕಪೂರ್ ಕುಟುಂಬವು ಐದು ದಿನಗಳು ಸುಬ್ರಹ್ಮಣ್ಯದಲ್ಲೇ ಉಳಿದುಕೊಂಡಿತ್ತು.

ಆ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಶಾಂತಲಾ ಸ್ಟುಡಿಯೋ ಮಾಲಿಕರಾದ ಲೋಕೇಶ್ ಬಿ.ಎನ್ ಎಂಬುವರು ರಿಷಿ ಕಪೂರ್ ಕುಟುಂಬದ ಪೋಟೋವನ್ನು ಕ್ಲಿಕ್ಕಿಸಿದ್ದರು.

- Advertisement -
spot_img

Latest News

error: Content is protected !!