- Advertisement -
- Advertisement -
ಗುರುವಾಯನಕೆರೆ: ಮುಖ್ಯರಸ್ತೆಯಲ್ಲಿರುವ ಅರಫಾ ಮಾರ್ಬಲ್ಸ್ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳೀಯ ಎಟಿಎಂ ಕಾವಲುಗಾರ ಲಿಂಗಪ್ಪ ಮೂಲ್ಯ (62) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಗುರುವಾಯನಕೆರೆಯ ಸ್ಯಾನಿಟರಿ ಶೋ ರೂಂನ ಎದುರು, ರಸ್ತೆಯಲ್ಲಿ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಲಾರಿ ಸಮೇತ ಸವಾರ ಪರಾರಿಯಾಗಿದ್ದಾನೆ.
ಲಾರಿಯ ಚಕ್ರ ಬೈಕ್ ಸವಾರನ ತಲೆಯ ಮೇಲೆ ಹರಿದು ಹೋಗಿ ಸ್ಥಳದಲ್ಲಿ ಭೀಕರ ವಾತಾವರಣ ಸೃಷ್ಟಿಸಿತ್ತು.
- Advertisement -