Thursday, June 4, 2026
Homeಕರಾವಳಿಮಂಗಳೂರು; ದೇವರಿಗೆ ನಮಸ್ಕರಿಸಿ ಹೋಗುತ್ತಿರುವಾಗಲೇ ಕುಸಿದು ಬಿದ್ದು ನಿವೃತ್ತ ಶಿಕ್ಷಕ ಸಾವು

ಮಂಗಳೂರು; ದೇವರಿಗೆ ನಮಸ್ಕರಿಸಿ ಹೋಗುತ್ತಿರುವಾಗಲೇ ಕುಸಿದು ಬಿದ್ದು ನಿವೃತ್ತ ಶಿಕ್ಷಕ ಸಾವು

- Advertisement -
- Advertisement -

ಮಂಗಳೂರು; ದೇವರಿಗೆ ನಮಸ್ಕರಿಸಿ ಹೋಗುತ್ತಿರುವಾಗಲೇ ಕುಸಿದು ಬಿದ್ದು ನಿವೃತ್ತ ಶಿಕ್ಷಕ ಸಾವನ್ನಪ್ಪಿರುವ ಘಟನೆ ಸುರತ್ಕಲ್ ಸಮೀಪದ ಇಡ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.ಮುಲ್ಕಿ ಸಮೀಪದ ಬೆಳ್ಳಾಯರು ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣರಾವ್ ರವರು (63) ಮೃತ ದುರ್ದೈವಿ.

ಕೃಷ್ಣ ರಾವ್ ರವರು ಕುಟುಂಬವೊಂದರ ಕಾರ್ಯಕ್ರಮಕ್ಕೆ ಸುರತ್ಕಲ್ ಸಮೀಪದ ಇಡ್ಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿದ್ದರು.ಅಲ್ಲಿ  ದೇವರಿಗೆ ಕೈ ಮುಗಿದು ಆವರಣದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಹೃದಯಘಾತದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದರು ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೃಷ್ಣರಾವ್ ರವರು ದೇವಸ್ಥಾನ ಆವರಣದಲ್ಲಿ ಹೃದಯಾಘಾತದಿಂದ ಕೆಳಗೆ ಬಿದ್ದ ದೃಶ್ಯ ದೇವಸ್ಥಾನದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!