- Advertisement -
- Advertisement -
ಮಂಗಳೂರಿನಲ್ಲಿ 90 ಲಕ್ಷ ರೂ. ಮೌಲ್ಯದ ಅಂಬರ್ ಗ್ರೀಸ್ ಹೊಂದಿದ್ದ ಮೂವರನ್ನು ಸಿಸಿಬಿ ಪೊಲೀಸರು ಪಣಂಬೂರು ಬೀಚ್ ಬಳಿ ಬಂಧಿಸಿದ್ದಾರೆ.
ಉಡುಪಿ ಜಿಲ್ಲೆ ಸಾಲಿಗ್ರಾಮ ಗ್ರಾಮದ ಜಯಕರ (39), ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆದಿತ್ಯ (25), ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಲೋಹಿತ್ ಕುಮಾರ್ ಗುರಪ್ಪನವರ್ (39) ಬಂಧಿತರು.
ಬಂಧಿತರಿಂದ 90 ಲಕ್ಷ ರೂ. ಮೌಲ್ಯದ 900ಗ್ರಾಂ ಅಂಬರ್ ಗ್ರೀಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಪಣಂಬೂರು ಬೀಚ್ ಬಳಿ ಮೂವರು ಅಂಬರ್ ಗ್ರೀಸ್ ಹೊಂದಿರುವ ಕುರಿತು ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳ ಸಹಿತ ಅಂಬರ್ ಗ್ರೀಸ್ ಅನ್ನು ವಶಕ್ಕೆ ಪಡೆದಿದ್ದಾರೆ.
- Advertisement -