- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ಗ್ರಾಮದ ಕರಂಬಾರಿನ ನಿವಾಸಿ, ಕಾರ್ಕಳದಲ್ಲಿ ವಾಸವಾಗಿದ್ದ ಖ್ಯಾತ ವಕೀಲರಾದ ಜೆ.ಕೆ. ಪೌಲ್ (55) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಅವರು ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅದರೆ ಅಲ್ಲಿ ಚಿಕಿತ್ಸೆ ಫಲಕರಿಯಾಗದೇ ನಿಧನರಾಗಿದ್ದಾರೆ.
ಇವರ ಅಂತ್ಯಕ್ರಿಯೆ ಶಿರ್ಲಾಲಿನ ಸ್ಥಳೀಯ ಚರ್ಚ್ ನಲ್ಲಿ ನಡೆಯಲಿದ್ದು, ಮೃತ ದೇಹವನ್ನು ಶಿರ್ಲಾಲು ಮನೆಗೆ ತರಲಾಗಿದೆ. ಅವರು ಪತ್ನಿ ಇಬ್ಬರು ಮಕ್ಕಳು ಸೇರಿದಂತೆ ತಮ್ಮ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
- Advertisement -