- Advertisement -
- Advertisement -
ಮಂಗಳೂರು: ಪಾವೂರು ಉಳಿಯ ಕುದ್ರು ದ್ವೀಪದ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮರಳುಗಾರಿಕೆಯನ್ನು ನಿಷೇ ಧಿಸಬೇಕು ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಅವರು ಆದೇಶ ಹೊರಡಿಸಿದ್ದಾರೆ.
ಸಂಚಾರ ದೋಣಿಗಳ ಹೊರತಾಗಿ ಈ ವ್ಯಾಪ್ತಿಯಲ್ಲಿ ಇತರೆ ಎಲ್ಲಾ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಣೆ, ದಕ್ಕೆಗಳಲ್ಲಿ ಅನಧಿಕೃತ ಮರಳು ಶೇಖರಣೆ ಮತ್ತು ಮರಳು ಹಂಚುವಂತಿಲ್ಲ. ಹಾಗೆಯೇ ಅಡ್ಯಾರು ಗ್ರಾಮದ ವಳಚ್ಚಿಲ್ ದಕ್ಕೆ, ಅಡ್ಯಾರು ಗ್ರಾಮ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹಿಂಭಾಗದ ದಕ್ಕೆ, ನದಿಯ, ದ್ವೀಪದ ಎಡಭಾಗದಲ್ಲಿರುವ ಪಾವೂರು ದಕ್ಕೆ ಈ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಸಲಾಗಿದೆ.
- Advertisement -