Thursday, May 2, 2024
Homeಕರಾವಳಿಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ಧರ್ಮಚಾಡಿಗೆ ಶಿಲಾನ್ಯಾಸ ಕಾರ್ಯಕ್ರಮ

ಬಂಟ್ವಾಳ; ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ಧರ್ಮಚಾಡಿಗೆ ಶಿಲಾನ್ಯಾಸ ಕಾರ್ಯಕ್ರಮ

spot_img
- Advertisement -
- Advertisement -

ಬಂಟ್ವಾಳ; ಗತಕಾಲದ ವೈಭವದಂತೆ ನೂತನವಾಗಿ ನಿರ್ಮಾಣಗೊಳ್ಳಲಿರುವ ಮಾಣಿಗುತ್ತು ಶ್ರೀ ಉಳ್ಳಾಲ್ತಿ, ಬೆಮ್ಮೆರ್, ಗುಡ್ಡೆಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ಧರ್ಮಚಾಡಿಗೆ ಶಿಲಾನ್ಯಾಸ ಕಾರ್ಯಕ್ರಮ ಅರ್ಚಕರಾದ ಪಳನೀರು ಅನಂತ ಭಟ್ಟರ ಪೌರೋಹಿತ್ಯದೊಂದಿಗೆ ವೈದಿಕ ವಿಧಿವಿಧಾನದ ಮೂಲಕ ನಡೆಯಿತು.

 ಅನಾದಿಕಾಲದ ಇತಿಹಾಸವನ್ನು ಹೊಂದಿರುವ ಒಬ್ಬಳು ಉಳ್ಲಾಲ್ತಿ ಮೂವರು ದೈವಗಳು ಎನ್ನುವ ಪರಂಪರೆಯನ್ನು ಹೊಂದಿರುವ ಮಾಣಿ ಗ್ರಾಮದಲ್ಲಿ ಉಳ್ಳಾಲ್ತಿಗೆ ವರ್ಷಾವಧಿ ಒಂದು ಮೆಚ್ಚಿ ಜಾತ್ರೆಯಾದರೆ, ದೈವಗಳಿಗೆ ವರ್ಷದಲ್ಲಿ ಏಳು ಕಡೆ ನೇಮಗಳು ನಡೆಯುತ್ತದೆ. ಗ್ರಾಮದ ಈ ಎಲ್ಲಾ ಸೇವೆಗಳಿಗೆ ಮಾಣಿಗುತ್ತು ಭಂಡಾರದ ಮನೆಯಿಂದ ಭಂಡಾರ ಹೋಗುವುದು ರೂಢಿಯಾಗಿರುತ್ತದೆ.

 ಹಳೆಯ ಚಾವಡಿಗೆ ಅನೇಕ ವರ್ಷಗಳು ಕಳೆದಿದ್ದು ಅಜೀರ್ಣಾವಸ್ಥೆಯಲ್ಲಿದ್ದಾಗ, ಇಪ್ಪತ್ತು ವರ್ಷಗಳ ಹಿಂದೆ ನೂತನ ಚಾವಡಿಯನ್ನು ಕಿರುದಾಗಿ ನಿರ್ಮಿಸಲಾಗಿತ್ತು. ಆದರೆ ಪ್ರಶ್ನಾಚಿಂತನೆಯಲ್ಲಿ  ಮತ್ತು ದೈವಗಳ ನುಡಿಯಲ್ಲಿ ಕಂಡುಬಂದ ಪ್ರಕಾರ ಚಾವಡಿಯನ್ನು ನೂತನವಾಗಿ ಹಳೆಯ ಸಂಪ್ರದಾಯದಂತೆ ರಚಿಸುವ ಉದ್ದೇಶದಿಂದ ನಿರ್ಮಾಣ ಕಾರ್ಯಕ್ಕೆ ಗುತ್ತಿನವರು ಮತ್ತು ಗ್ರಾಮಸ್ಥರು ಮುಂದಾಗಿರುತ್ತಾರೆ.

ಮಾಣಿಗುತ್ತಿನಲ್ಲಿ ಜರುಗಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ   ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ. ರಮಾನಾಥ ರೈ, ವಕೀಲರಾದ ಅಶ್ವನಿ ಕುಮಾರ್ ರೈ, ಬಾಳ್ತಿಲಬೀಡು ಬೃಜೇಶ್ ಬಂಗ, ಪೂಂಜಲ್ಮಾರಗುತ್ತು ಮೋಹನ ಕುಮಾರ್ ಚೌಟ, ಪೆರಾಜೆಗುತ್ತು ಶ್ರೀಕಾಂತ್ ಆಳ್ವ, ಮಾಣಿಗುತ್ತು ನಾಗೇಶ್ ಶೆಟ್ಟಿ, ಮಾಣಿಗುತ್ತು ಸಚಿನ್ ರೈ, ಸಂತೋಷ್ ಶೆಟ್ಟಿ ಅರೆಬೆಟ್ಟು, ಜಗನ್ನಾಥ ಚೌಟ ಬದಿಗುಡ್ಡೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಮಧುಸೂಧನ ಭಟ್ ಭರಣೀಕೆರೆ, ರಾಮಚಂದ್ರ ಪೂಜಾರಿ ಪಾದೆ, ವಿಜೇತ್ ಶೆಟ್ಟಿ ಅರೆಬೆಟ್ಟು, ರವೀಂದ್ರ ರೈ ಖಂಡಿಗ, ರವೀಂದ್ರ ರೈ  ಮಂಜೊಟ್ಟಿ, ಗಣೇಶ್ ಭಟ್ ಮಕರಂದ, ಸಂದೀಪ್ ಶೆಟ್ಟಿ ಅರಿಯಡ್ಕ,ಗಂಗಾಧರ್ ರೈ ತುಂಗೆರೆಕೊಡಿ,ಅಮಿತ್ ಕುಮಾರ್ ಜೈನ್ ಕನ್ನೋಟ್ಟುಗುತ್ತು ಮೋಹನ್ ಪೈ ಮಾಣಿ, ಮತ್ತಿತರ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!