Thursday, June 4, 2026
Homeಕರಾವಳಿಮಂಗಳೂರು ಯುವಕರ ತಂಡ ನಿರ್ಮಿಸಿದ ತುಳು ಚಿತ್ರ 'ದಿಲ್ ರಂಗ್ 2' ಇಂದು ತೆರೆಗೆ !

ಮಂಗಳೂರು ಯುವಕರ ತಂಡ ನಿರ್ಮಿಸಿದ ತುಳು ಚಿತ್ರ ‘ದಿಲ್ ರಂಗ್ 2’ ಇಂದು ತೆರೆಗೆ !

- Advertisement -
- Advertisement -

ಮಂಗಳೂರು : ಸಿನಿಮಾ ಮಾಡಬೇಕೆಂಬ ಹುಮ್ಮಸ್ಸಿನಿಂದ ಹೊರಟ ಯುವಕರ ತಂಡವೊಂದು ನಿರ್ಮಿಸಿರುವ ‘ದಿಲ್ ರಂಗ್ 2’ ಮ್ಯೂಸಿಕಲ್ ಸಿನಿಮಾ ಇಂದು ಬಿಡುಗಡೆಯಾಗಲಿದೆ.

ಯುವ ನಿರ್ದೇಶಕ ಅಭಿಷೇಕ್ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದಿಲ್ ರಂಗ್ 2’ ಇಂದು ನಗರದ ಪುರಭವನದಲ್ಲಿ 5 ಗಂಟೆಗೆ ಬಿಡುಗಡೆ ಆಗಲಿದೆ. ಸುಮಾರು 40 ನಿಮಿಷಗಳ ಅವಧಿ ಹೊಂದಿರುವ ‘ದಿಲ್ ರಂಗ್ 2’ ಸಿನಿಮಾವು ಪುರಭವನದಲ್ಲಿ ಒಟ್ಟು ಮೂರು ಬಾರಿ ಪ್ರದರ್ಶನ ಕಾಣಲಿದೆ. ಸಂಜೆ 5, 6, ಹಾಗೂ 7 ಗಂಟೆಗೆ ಮೂರು ಬಾರಿ ಸಿನಿಮಾವನ್ನು ಪ್ರದರ್ಶಿಸಲಾಗುತ್ತದೆ. ಸಿನಿಮಾ ವೀಕ್ಷಣೆಗೆ 99 ರೂ. ಟಿಕೆಟ್ ಇರಿಸಲಾಗಿದೆ.

ದಿಲ್ ರಂಗ್ 2′ ಸಿನಿಮಾ ತಂದೆ-ಮಗಳ ಬಾಂಧವ್ಯದ ಕಥೆಯನ್ನು ತಿಳಿಸಿ ಕೊಡುತ್ತದೆ. ಪ್ರೀತಿಯ ಸೆಳೆತಕ್ಕೆ ಸಿಕ್ಕ ಮಗಳಿಗೆ ತಂದೆಯ ಪ್ರೀತಿ ದೊಡ್ಡದೇ ಅಥವಾ ಪ್ರಿಯತಮನ ಪ್ರೀತಿ ಮುಖ್ಯವೇ ಎಂದು ತೊಳಲಾಟಕ್ಕೆ ಸಿಲುಕುವ ಕಥೆಯನ್ನು ಹೊಂದಿದೆ.

ವಿಜಿತ್ ಕೋಟ್ಯಾನ್ ಎಂಬ ಹೊಸ ನಟನನ್ನು ಈ ಸಿನಿಮಾ ಮೂಲಕ ನಿರ್ದೇಶಕರು ತೆರೆಗೆ ಪರಿಚಯಿಸಿದ್ದಾರೆ. ನಾಯಕಿಯಾಗಿ ಸಮತಾ ಅಮಿನ್ ನಟಿಸಿದ್ದಾರೆ. ಶ್ರೀಧರ್ ಕರ್ಕೇರಾ ಅವರ ಸಂಗೀತವಿದ್ದು, ರಚಿನ್ ಶೆಟ್ಟಿ ಹಾಗೂ ಪ್ರಜ್ವಲ್ ಸುವರ್ಣ ಛಾಯಾಗ್ರಹಣ ಮಾಡಿದ್ದಾರೆ. ಜೊತೆಗೆ ಸಿನಿಮಾದ ಹಾಡುಗಳು ಮುಂದಿನ ದಿನಗಳಲ್ಲಿ ತೆಲುಗು, ತಮಿಳು, ಕುಂದಾಪುರ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿ ಬರಲಿದೆ.

- Advertisement -

Latest News

error: Content is protected !!