ಮಂಗಳೂರು : ಬೆಳ್ಳಾರೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಎನ್.ಐ.ಎ ಅಧಿಕಾರಿಗಳು ಎಸ್.ಡಿ.ಪಿ.ಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದ್ದು ಆದ್ರೆ ಇದು ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದ ದಾಳಿ ಅಲ್ಲ ಬಿಹಾರದ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ಎನ್.ಐ.ಎ ದಾಳಿ ಎಂದು ಮಹಾ ಎಕ್ಸ್‌ಪ್ರೆಸ್ ಗೆ ಪೊಲೀಸ್ ಮೂಲಗಳು ತಿಳಿಸಿದೆ

ಬಿಹಾರದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(NIA)ಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಬಾಂಬ್ ಸ್ಪೋಟಿಸಿದ ಆರೋಪಿಗಳ ಜೊತೆ ಎಸ್.ಡಿ.ಪಿ.ಐ ನಾಯಕ ರಿಯಾಝ್ ಫರಂಗಿಪೇಟೆ ಫೋನ್ ಸಂಪರ್ಕದಲ್ಲಿದ್ದ ಎಂಬ ಆರೋಪದ ಮೇಲೆ ಇಂದು ಬೆಳಗ್ಗೆ 6 ಗಂಟೆಗೆ ಕೋರ್ಟ್ ಸರ್ಚ್ ವಾರೆಂಟ್ ಪಡೆದು ಬಂದ ಬಿಹಾರದಿಂದ ಬಂದ ನಾಲ್ಕು ಜನ ರಾಷ್ಟ್ರೀಯ ತನಿಖಾ ದಳದ(NIA) ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರ ಪಡೆದು ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇನ್ನೂ ದಾಳಿ ವಿಚಾರ ತಿಳಿದ ಎಸ್.ಡಿ.ಪಿ.ಐ ಕಾರ್ಯಕರ್ತರು ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರು ತಿಳುವಳಿಕೆ ನೀಡಿ ವಾಪಸ್ ಕಳುಹಿಸಿದ್ದಾರೆ.

ಎಸ್.ಡಿ.ಪಿ.ಐ ನಾಯಕ ರಿಯಾಝ್ ಫರಂಗಿಪೇಟೆ ಆರೋಪಿಗಳ ಜೊತೆ ನೇರ ಸಂಪರ್ಕವನ್ನು ಹೊಂದಿದ್ದ ಎಂಬ ಆರೋಪದ ಮೇಲೆ ಹೆಚ್ಚಿನ ವಿಚಾರಣೆಗಾಗಿ ಬಿಹಾರ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ


