Thursday, May 9, 2024
Homeತಾಜಾ ಸುದ್ದಿಪಾತ್ರಗಳಿಗಾಗಿ ಯಾವತ್ತೂ ಯಾರ ಜೊತೆಯೂ ಮಂಚಕ್ಕೆ ಏರಿಲ್ಲ ಎಂದ ಕೆಜಿಎಫ್ ನಟಿ

ಪಾತ್ರಗಳಿಗಾಗಿ ಯಾವತ್ತೂ ಯಾರ ಜೊತೆಯೂ ಮಂಚಕ್ಕೆ ಏರಿಲ್ಲ ಎಂದ ಕೆಜಿಎಫ್ ನಟಿ

spot_img
- Advertisement -
- Advertisement -

ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ನಾನು ಯಾರ ಜೊತೆಯೂ ಕಾಂಪ್ರಮೈಸ್ ಆಗಿಲ್ಲ. ಕೇವಲ ಪ್ರತಿಭೆಯಿಂದಲೇ ಇಷ್ಟು ವರ್ಷಗಳ ಕಾಲ ಬಾಲಿವುಡ್‌ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ ಎಂದು ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಹೇಳಿದ್ದಾರೆ.

ಬಾಲಿವುಡ್ ನಲ್ಲಿ ಯಾರ ಸಹಾಯವೂ ಇಲ್ಲದೇ ತಾವು ಬೆಳೆದುಬಂದಿದ್ದಾಗಿ ಹೇಳಿಕೊಂಡಿರುವ ರವೀನಾ, ತಮ್ಮ ವೃತ್ತಿ ಜೀವನ ಆರಂಭದಲ್ಲಾದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ಯಾವುದೇ ಗಾಡ್‌ಫಾದರ್‌ಗಳನ್ನು ಹೊಂದಿರಲಿಲ್ಲ. ಅಲ್ಲದೇ ನನ್ನನ್ನು ಯಾವುದೇ ನಾಯಕ ಕೂಡ ಪ್ರಮೋಟ್ ಮಾಡಲಿಲ್ಲ. ನಾನು ಸಿನಿಮಾದಲ್ಲಿ ಅಭಿನಯಿಸುವ ಅವಕಾಶಕ್ಕಾಗಿ ಹೀರೋಗಳ ಜೊತೆ ಮಲಗಲಿಲ್ಲ ಅಥವಾ ಯಾರೊಂದಿಗೂ ಅಫೇರ್ ಕೂಡ ಇಟ್ಟುಕೊಂಡಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕೆಜಿಎಫ್-2 ಚಿತ್ರದಲ್ಲಿ ನಟಿ ರವೀನಾ ಟಂಡನ್ ಪ್ರಧಾನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಬಹಳಷ್ಟು ಸಂದರ್ಭಗಳಲ್ಲಿ ನನ್ನನ್ನು ಅಹಂಕಾರ ಇರುವವಳು ಎಂದು ಕರೆದಿದ್ದರು. ಯಾಕೆಂದರೆ ನಾನು ಅವರು ಹೇಳಿದಂತೆ ಕೇಳುತ್ತಿರಲಿಲ್ಲ. ಅವರು ನಗು ಎಂದರೆ ನಗಬೇಕು, ಕುಳಿತುಕೋ ಎಂದಾಗ ಕುಳಿತುಕೊಳ್ಳಬೇಕಿತ್ತು. ಹೀಗಾಗಿ ಅವರ ತಾಳಕ್ಕೆ ನಾನು ಕುಣಿಯುತ್ತಿರಲಿಲ್ಲ. ತಮಗೆ ಆಗದವರು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದರು. ಗಾಸಿಪ್ ಗಳು ಸಾಕಷ್ಟು ಹರಡುತ್ತಿದ್ದವು. ಆದರೆ ತಾವು ಮಾತ್ರ ತಮ್ಮ ಕೆಲಸದತ್ತ ಗಮನ ಹರಿಸುತ್ತಿದ್ದುದಾಗಿ ಬಾಲಿವುಡ್ ನಟಿ ರವೀನಾ ಟಂಡನ್ ಹೇಳಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!