Monday, May 13, 2024
Homeತಾಜಾ ಸುದ್ದಿಮಂಗಳೂರು: ಗಗನಕ್ಕೇರಿದ ಗಲ್ಫ್‌ ವಿಮಾನ ಪ್ರಯಾಣ ದರ:ದಮಾಮ್‌ನಿಂದ ಮಂಗಳೂರಿಗೆ ₹50 ಸಾವಿರಕ್ಕೇರಿದ ದರ

ಮಂಗಳೂರು: ಗಗನಕ್ಕೇರಿದ ಗಲ್ಫ್‌ ವಿಮಾನ ಪ್ರಯಾಣ ದರ:ದಮಾಮ್‌ನಿಂದ ಮಂಗಳೂರಿಗೆ ₹50 ಸಾವಿರಕ್ಕೇರಿದ ದರ

spot_img
- Advertisement -
- Advertisement -

ಮಂಗಳೂರು: ರಜೆ ಹಿನ್ನೆಲೆಯಲ್ಲಿ ಬಹುತೇಕ ಗಲ್ಫ್‌ ರಾಷ್ಟ್ರಗಳ ವಿಮಾನ ಪ್ರಯಾಣ ದರ ಗಗನಕ್ಕೇರಿದೆ. ಕಳೆದೊಂದು ತಿಂಗಳಿನಿಂದ ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ಪ್ರಯಾಣ ದರ ದುಬಾರಿಯಾಗಿದ್ದು, ಜುಲೈ ತಿಂಗಳ ಅಂತ್ಯದವರೆಗೂ ದರ ಇದೇ ರೀತಿಯಲ್ಲಿ ಮುಂದುವರಿಯಲಿದೆ.

ದಮಾಮ್‌ನಿಂದ ಮಂಗಳೂರಿಗೆ ತಡೆರಹಿತ ವಿಮಾನ ಯಾನದ ದರವು 50 ಸಾವಿರ ರೂ.ಗೆ ತಲುಪಿದ್ದು, ಇದು ಇತರೆಲ್ಲ ರಾಷ್ಟ್ರಗಳ ಪ್ರಯಾಣಕ್ಕಿಂತಲೂ ದುಬಾರಿಯಾಗಿದೆ. ಗಲ್ಫ್‌ ರಾಷ್ಟ್ರಗಳಿಗೆ ಮಂಗಳೂರಿನಿಂದ ಸಂಚರಿಸುವ ಬಹುತೇಕ ಎಲ್ಲ ವಿಮಾನಗಳು ಫುಲ್‌ ಬುಕ್ಕಿಂಗ್‌ ಕಾಣುತ್ತಿದ್ದು, ಭಾರೀ ಡಿಮ್ಯಾಂಡ್‌ ಇರುವ ಕಾರಣದಿಂದ ವಿಮಾನ ದರದಲ್ಲಿ ವಿಪರೀತ ಏರಿಕೆ ಕಂಡು ಬಂದಿದೆ ಎಂದು ವಿಮಾನಯಾನಗಳ ಮೂಲಗಳು ತಿಳಿಸಿವೆ.

ಕೋವಿಡ್‌ ಸಾಂಕ್ರಾಮಿಕ ನಂತರದ ದಿನಗಳಲ್ಲಿ ದ್ವಿಮುಖ ಸಂಚಾರದ ಟಿಕೆಟ್‌ ದರ 25 ಸಾವಿರ ರೂ.ಗಿಂತ ಕಡಿಮೆಯಿತ್ತು. ಈಗ ಅದೇ ದರ 35 ಸಾವಿರದಿಂದ 40 ಸಾವಿರಕ್ಕೆ ತಲುಪಿದೆ. ಬಹರೈನ್‌ನಿಂದ ಮಂಗಳೂರಿಗೆ ವಿಮಾನ ಪ್ರಯಾಣ ದರ 50 ಸಾವಿರ ದಾಟಿದೆ. ಸಾಮಾನ್ಯ ದಿನಗಳಲ್ಲಿ ಈ ಮಾರ್ಗದಲ್ಲಿ ದ್ವಿಮುಖ ಸಂಚಾರ 40 ಸಾವಿರ ರೂ. ಒಳಗೆ ಲಭ್ಯವಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ ಬಳಿಕ ಗಲ್ಫ್‌ ರಾಷ್ಟ್ರಗಳಲ್ಲಿ ಸಹಜ ಸ್ಥಿತಿ ಇರುವ ಕಾರಣ ಎಲ್ಲ ವಿಮಾನ ಸಂಚಾರಗಳು ಯಥಾಸ್ಥಿತಿಯಲ್ಲಿ ಸಂಚರಿಸುತ್ತಿವೆ. ಈ ಕಾರಣ ಗಲ್ಫ್‌ ವಿಮಾನ ಯಾನಕ್ಕೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಇದಲ್ಲದೆ ಸದ್ಯ ಗಲ್ಫ್‌ ರಾಷ್ಟ್ರಗಳಲ್ಲಿ ರಜೆ ಇರುವ ಕಾರಣದಿಂದ ಬಹುತೇಕರು ಅಲ್ಲಿಂದ ಸ್ವದೇಶಕ್ಕೆ ಬಂದು ಮರಳಿ ಹೋಗಲು ಟಿಕೆಟ್‌ ಬುಕ್‌ ಮಾಡುತ್ತಿದ್ದಾರೆ. ಈ ಕಾರಣದಿಂದ ಸಹಜವಾಗಿಯೇ ಟಿಕೆಟ್‌ ದರದಲ್ಲಿ ಭಾರಿ ಏರಿಕೆಯಾಗಿದೆ. ಜುಲೈ ಬಳಿಕ ಟಿಕೆಟ್‌ ದರದಲ್ಲಿ ಸಹಜ ಸ್ಥಿತಿಗೆ ಬರಲಿದೆ ಎಂದು ಟ್ರಾವೆಲ್ಸ್‌ ಏಜೆನ್ಸಿಯೊಂದರ ಸಿಬ್ಬಂದಿ ವಿನ್ಸೆಂಟ್‌ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!