Friday, June 5, 2026
Homeಕರಾವಳಿಕಡಬ; 10ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ :ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

ಕಡಬ; 10ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ :ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಕಡಬ:  10ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಬ್ಬರು ವ್ಯಕ್ತಿಗಳನ್ನು ಕಡಬ ಠಾಣಾ ಪೋಲಿಸರು ವಶ ಪಡೆದಿದ್ದಾರೆ

ನೂಜಿಬಾಳ್ತಿಲದ ಖಾಸಗಿ ಶಾಲೆಯೊಂದರಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಯುವಕನೊಬ್ಬ ಪುಸಲಾಯಿಸಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ಮೊದಲೇ ಆರೋಪಿ ಯುವಕನಿಗೆ ಬಾಲಕಿಯ ಮನೆಯವರು ಎಚ್ಚರಿಕೆ ನೀಡಿದ್ದರೂ ಯುವಕ ಕ್ಯಾರೇ ಅಂದಿರಲಿಲ್ಲ‌‌ ಎನ್ನಲಾಗಿದೆ. ಅಲ್ಲದೆ ಆರೋಪಿ ಯುವಕ ಹೊರಗಿನವನಾಗಿದ್ದು, ಆತನಿಗೆ ಸ್ಥಳೀಯ ಯುವಕನೊಬ್ಬ ಆಶ್ರಯ ನೀಡಿದ್ದ ಆರೋಪಿಸಲಾಗಿದೆ.

ಸದ್ಯ ಆಶ್ರಯ ನೀಡಿದ ಸ್ಥಳೀಯ ವ್ಯಕ್ತಿಯನ್ನು ಪೋಲಿಸರು ತನಿಖೆಗಾಗಿ ವಶಕ್ಕೆ ಪಡೆದಿದ್ದು ಹಾಗೂ ಅತ್ಯಾಚಾರ ಎಸಗಿದ ಆರೋಪಿಯ‌ನ್ನು ಬಂಧಿಸಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪೋಲಿಸರು ಪೋಕ್ಸೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!