Monday, June 8, 2026
Homeಕರಾವಳಿಉಡುಪಿಮಂಗಳವಾರದಿಂದ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪವಿತ್ರ 'ರಂಜಾನ್' ಉಪವಾಸ ಆರಂಭ

ಮಂಗಳವಾರದಿಂದ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪವಿತ್ರ ‘ರಂಜಾನ್’ ಉಪವಾಸ ಆರಂಭ

- Advertisement -
- Advertisement -

ಮಂಗಳೂರು: ಸೋಮವಾರ ರಂಝಾನ್ ತಿಂಗಳ ಚಂದ್ರದರ್ಶನವಾದ್ದರಿಂದ ಮಂಗಳವಾರದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಂ ಬಾಂಧವರ ರಂಝಾನ್ ಉಪವಾಸ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಮಾಹಿತಿ ನೀಡಿದ್ದಾರೆ.

ಸೋಮವಾರ ರಂಝಾನ್ ತಿಂಗಳ ಚಂದ್ರದರ್ಶನವಾದ್ದರಿಂದ ಮಂಗಳವಾರ ರಂಝಾನ್ ಚಾಂದ್ 1 ಆಚರಿಸಲಾಗುವುದು ಎಂದು ಖಾಝಿ ತಿಳಿಸಿದ್ದಾರೆ. ಉಡುಪಿ ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೂಡಾ ನಾಳೆಯೇ ಉಪವಾಸವೆಂದು ತಿಳಿಸಿರುತ್ತಾರೆ.

ಕೇರಳ ರಾಜ್ಯ, ಕರ್ನಾಟಕದ ದ.ಕ ಮತ್ತು ಉಡುಪಿ ಜಿಲ್ಲೆಗಳ ಹೊರತಾದ ಕರ್ನಾಟಕದ ಇತರ ಪ್ರದೇಶಗಳು ಹಾಗೂ ಭಾರತ ಒಕ್ಕೂಟದಾದ್ಯಂತ ಚಂದ್ರನು ಗೋಚರವಾಗದ ಹಿನ್ನೆಲೆಯಲ್ಲಿ ಎಪ್ರಿಲ್ 14 ಬುಧವಾರವೇ ರಂಜಾನ್ ತಿಂಗಳು ಆರಂಭವಾಗಲಿದೆಯೆಂದು ತಿಳಿದು ಬಂದಿದೆ.

- Advertisement -

Latest News

error: Content is protected !!