Friday, July 5, 2024
Homeತಾಜಾ ಸುದ್ದಿನಟ ದರ್ಶನ್‌ಗೆ ಗಲ್ಲುಶಿಕ್ಷೆಯೋ ಅಥವಾ ಜೀವಾವಧಿ ಶಿಕ್ಷೆಯೋ?: ಎಕ್ಸ್ ನಲ್ಲಿ ಮೋಹಕ ತಾರೆ ರಮ್ಯಾ ಪ್ರಶ್ನೆ

ನಟ ದರ್ಶನ್‌ಗೆ ಗಲ್ಲುಶಿಕ್ಷೆಯೋ ಅಥವಾ ಜೀವಾವಧಿ ಶಿಕ್ಷೆಯೋ?: ಎಕ್ಸ್ ನಲ್ಲಿ ಮೋಹಕ ತಾರೆ ರಮ್ಯಾ ಪ್ರಶ್ನೆ

spot_img
- Advertisement -
- Advertisement -

ಬೆಂಗಳೂರು; ತಮ್ಮ ಅಭಿಮಾನಿಯ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ವಿರುದ್ಧ ಇದೀಗ ಮೋಹಕ ತಾರೆ ರಮ್ಯಾ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ನಲ್ಲಿ ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕೆಂದು ಹೇಳಿರುವ ಪೋಸ್ಟ್‌ ವೊಂದನ್ನು ಹಂಚಿಕೊಂಡು, ತನ್ನ ಅಭಿಪ್ರಾಯವನ್ನೂ ವ್ಯಕ್ತಪಡಿಸಿರುವ ರಮ್ಯಾ

“ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷೆ ಸಾಬೀತಾದರೆ ದರ್ಶನ್‌ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಪಡೆಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಹಣ ಅಥವಾ ಇತರೆ ಅಂಶ ಪರಿಣಾಮ ಬೀರಬಾರದು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದಿದ್ದಾರೆ.

ರಮ್ಯಾ ಈ ಹಿಂದೆ ದರ್ಶನ್‌ ಅವರ ಮೇಲೆ ಚಪ್ಪಲಿ ಎಸೆತವಾದ ಪ್ರಕರಣದ ಸಂದರ್ಭದಲ್ಲೂ ಸ್ಪಂದಿಸಿದ್ದರು. ಫ್ಯಾನ್ಸ್‌ ಹಾಗೂ ಸ್ಟಾರ್‌ ಗಳಿಗೆ ಬುದ್ಧಿವಾದ ಹೇಳಬೇಕಾಗಿದೆ ಎಂದಿದ್ದರು.ಸದ್ಯ ರಮ್ಯಾ ಅವರ ಈ ಟ್ವೀಟ್‌ ಗಮನ ಸೆಳೆದಿದ್ದು, ಕೆಲವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ  ಜೊತೆ ಅಭಿನಯಿಸಿದ್ದ ಕೋ ಸ್ಟಾರ್ ಬಗ್ಗೆನೇ ರಮ್ಯಾ ಈ ರೀತಿ ಪೋಸ್ಟ್ ಮಾಡಿದ್ದು ಅಚ್ಚರಿ ಮೂಡಿಸಿದೆ.

- Advertisement -
spot_img

Latest News

error: Content is protected !!