Friday, June 5, 2026
Homeಕರಾವಳಿಉಡುಪಿಉಡುಪಿ; ಬಸ್ ನಲ್ಲೇ ಬಸ್ ಚಾಲಕನ ಜೊತೆ ಆತನ ಪ್ರೇಯಿಸಿಯ ಕಿರಿಕ್; ಲವರ್ ಕಾಟ ತಾಳಲಾರದೇ...

ಉಡುಪಿ; ಬಸ್ ನಲ್ಲೇ ಬಸ್ ಚಾಲಕನ ಜೊತೆ ಆತನ ಪ್ರೇಯಿಸಿಯ ಕಿರಿಕ್; ಲವರ್ ಕಾಟ ತಾಳಲಾರದೇ ಬಸ್ ಅನ್ನು ಅಲ್ಲೇ ಬಿಟ್ಟು ಹೊರಟು ಹೋದ ಡ್ರೈವರ್; ಪ್ರಯಾಣಿಕರಿಗೆ ಪೇಚಾಟ

- Advertisement -
- Advertisement -

ಉಡುಪಿ; ಬಸ್ ನಲ್ಲೇ ಬಸ್ ಚಾಲಕನ ಜೊತೆ ಆತನ ಪ್ರೇಯಿಸಿ ಜಗಳವಾಡಿ ಕೊನೆಗೆ  ಲವರ್ ಕಾಟ ತಾಳಲಾರದೇ ಬಸ್ ಅನ್ನು ಅಲ್ಲೇ ಬಿಟ್ಟು ಡ್ರೈವರ್ ಹೊರಟು ಹೋದ ಘಟನೆ ನಿಟ್ಟೂರು ಬಳಿ ನಡೆದಿದೆ.

ಉಡುಪಿ ನಗರದಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್ ಗೆ ಅದೇ ಬಸ್ ಡ್ರೈವರ್ ಪ್ರೇಯಸಿ ನಿಟ್ಟೂರಿನಲ್ಲಿ ಹತ್ತಿದ್ದಾಳೆ. ಬಸ್  ಹತ್ತುತ್ತಿದ್ದಂತೆ ಚಾಲಕ ಹಾಗೂ ಆತನ ಲವರ್ ಗೆ ಜಗಳ ಶುರುವಾಗಿದೆ.  ಇಬ್ಬರ ನಡುವೆ ಜಗಳ ಆಗುತ್ತಿದ್ದರೂ ಬಸ್ ಓಡಿಸುತ್ತಲೇ ಇದ್ದ ಚಾಲಕ. ಈ ವೇಳೆ ಬಸ್ ಕಂಡೆಕ್ಟರ್ ಇಬ್ಬರನ್ನು ಸಮಾಧಾನಪಡಿಸಲು ಯತ್ನಿಸಿದ್ದಾನೆ.ಆದರೂ ಜಗಳ ನಿಂತಿಲ್ಲ.

ಕೊನೆಗೆ ಪ್ರೇಯಸಿ ಕಾಟ ತಾಳಲಾರದೇ ಬಸ್ ಡ್ರೈವರ್ ಸಂತೆಕಟ್ಟೆಯ ಆಶೀರ್ವಾದ್ ಥಿಯೇಟರ್ ಬಳಿ ಬಸ್ ನಿಲ್ಲಿಸಿ, ಬಸ್ಸಿನಿಂದ ಇಳಿದು ಹೋಗಿದ್ದಾನೆ. ಡ್ರೈವ್ರ ಹೋದ  ಬೆನ್ನಲ್ಲೇ ಆಕೆಯೂ ಬಸ್ಸಿನಿಂದ ಇಳಿದು ಹೋಗಿದ್ದಾಳೆ. ಬಸ್ಸನ್ನು ಅರ್ಧಲ್ಲೇ ನಿಲ್ಲಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬಳಿಕ ಬಸ್ ಕಂಡಕ್ಟರ್ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

- Advertisement -

Latest News

error: Content is protected !!