Thursday, June 25, 2026
Homeಕರಾವಳಿಸೋಲುವ ಭಯದಲ್ಲಿದ್ದಾರಾ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ;  ಮತದಾರರನ್ನು ಸೆಳೆಯಲು ನಟಿ ರಮ್ಯಾ ಮೊರೆ ಹೋದ ಅಶೋಕ್...

ಸೋಲುವ ಭಯದಲ್ಲಿದ್ದಾರಾ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ;  ಮತದಾರರನ್ನು ಸೆಳೆಯಲು ನಟಿ ರಮ್ಯಾ ಮೊರೆ ಹೋದ ಅಶೋಕ್ ರೈ

- Advertisement -
- Advertisement -

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರಿಗೆ ಸೋಲು ಭಯ ಜೋರಾಗಿ ಕಾಡುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಒಂದು ಕಡೆ ಸಹೋದರನ ಮನೆ ಮೇಲೆ ಐಟಿ ದಾಳಿ, ಮತ್ತೊಂದು ಕಡೆ ತ್ಮ ವಿರುದ್ಧ ಸೋಷಿಯಲ್ ಮೀಡಿಯಾಜಲ್ಲಿ ಹರಿದಾಡಿದ ಒಂದಷ್ಟು ಪೋಸ್ಟ್ ಗಳು ಚುನಾವಣೆಯ ಫಲಿಂತಾಶದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂಬುವುದು ಅವರಿಗೆ ಕನ್ಫರ್ಮ್ ಆದಂತೆ ಕಾಣಿಸುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಿನ್ನೆ ಕಾಂಗ್ರಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗ ದಳವನ್ನು ನಿಷೇಧ ಮಾಡುತ್ತೇನೆ ಎಂದು ಹೇಳಿರೋದು ಕಾಂಗ್ರೆಸ್ ಪಾಲಿಗೆ ಬಹು ದೊಡ್ಡ ಹೊಡೆತ. ಇದೆಲ್ಲವನ್ನು ಗಮನಿಸಿದ ಅಶೋಕ್ ರೈ ಮತದಾರರನ್ನು ಸೆಳೆಯಲು ಸರ್ಕಸ್ ಮಾಡುತ್ತಿದ್ದು ಅದಕ್ಕಾಗಿ ನಟಿ ರಮ್ಯಾ ಮೊರೆ ಹೋಗಿದ್ದಾರೆ.

 ಅದರಂತೆ ಮೇ.8 ರಂದು ಪುತ್ತೂರು ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ರೋಡ್ ಶೋನಲ್ಲಿ ಚಿತ್ರನಟಿ ರಮ್ಯಾ ರವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ.ರಾಜಾರಾಂ ಕೆ ಬಿ ತಿಳಿಸಿದ್ದಾರೆ.

ಆದರೆ ಸಿನಿಮಾ ತಾರೆಯ ಮುಖ ನೋಡಿದ ತಕ್ಷಣ ಅಶೋಕ್ ರೈ ಅವರು ಮಾಡಿದ ಕೆಲಸಗಳನ್ನು ಮರೆಯುವಷ್ಟು ಜನ ಮೂರ್ಖರಲ್ಲ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

- Advertisement -

Latest News

error: Content is protected !!