Wednesday, June 26, 2024
Homeಕರಾವಳಿಅಯೋದ್ಯೆಯಲ್ಲಿ ಪ್ರತಿಷ್ಠೆಯಾಗಬೇಕಿದ್ದ ಪಂಚಲೋಹದ ವಿಗ್ರಹ ಬೆಳ್ತಂಗಡಿಯಲ್ಲಿ ಪ್ರತಿಷ್ಠಾಪನೆ !

ಅಯೋದ್ಯೆಯಲ್ಲಿ ಪ್ರತಿಷ್ಠೆಯಾಗಬೇಕಿದ್ದ ಪಂಚಲೋಹದ ವಿಗ್ರಹ ಬೆಳ್ತಂಗಡಿಯಲ್ಲಿ ಪ್ರತಿಷ್ಠಾಪನೆ !

spot_img
- Advertisement -
- Advertisement -

ಬೆಳ್ತಂಗಡಿ: ಅದು 1989ರ ಪರ್ವ ಕಾಲ!, ದೇಶಾಧ್ಯಂತ ಹಿಂದುಗಳು ಅಯೋಧ್ಯಾ ರಾಮನ ಮನನದಲ್ಲೇ ಎಚ್ಚರಗೊಳ್ಳುವ ಕಾಲವದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿಯೇ ಎಂಬ ಗಂಟಾಘೋಷ ವಾಕ್ಯದೊಂದಿಗೆ ಸಮಸ್ತ ಹಿಂದೂಗಳನ್ನು ಎಚ್ಚರಿಸುವ ಕಾಯಕದಲ್ಲಿ ನಿರಂತರ ಯೋಜನೆ ರೂಪಿಸುತ್ತಿದ್ದ ಕಾಲ! ಇದೇ ಕಾಲಘಟ್ಟದಲ್ಲಿ ಕರಸೇವಕರೊಂದಿಗೆ ಅಯೋಧ್ಯೆಗೆ ತೆರಳಿದ್ದ ಪಂಚಲೋಹದ ಶ್ರೀರಾಮ, ಸೀತೆ, ಲಕ್ಷ್ಮಣ ವಿಗ್ರಹ ಮತ್ತೆ ಕರಾವಳಿಯ ಪುಟ್ಟ ಗ್ರಾಮ ಬೆಳ್ತಂಗಡಿ ತಾಲೂಕಿನ ಕಣಿಯೂರಿನಲ್ಲಿ ಪ್ರತಿಷ್ಠಾಪನೆಗೊಂಡಿದೆ.

ಅಯೋಧ್ಯೆಗೆ ಗ್ರಾಮ ಗ್ರಾಮಗಳಿಂದ ಇಟ್ಟಿಗೆ ಸಮರ್ಪಿಸುವ ಅಭಿಯಾನದ ರಥ 1989ರಲ್ಲಿ ಕರಾವಳಿಯಿಂದ ತೆರಳಿದೆ. ಶ್ರೀಕ್ಷೇತ್ರ ಧರ್ಮಸ್ಥದಿಂದ ಹೊರಟ ಈ ರಥದದ ಮುನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗೆಯವರು ನೀಡಿದ ಪಂಚಲೋಹದ ಶ್ರೀರಾಮ, ಸೀತೆ, ಲಕ್ಷ್ಮಣ ವಿಗ್ರಹವನ್ನೂ ಇಟ್ಟು ಅಯೋದ್ಯೆಗೆ ಕಳುಹಿಸಲಾಗಿತ್ತು. ಆದರೆ ಅಯೋಧ್ಯೆಯಲ್ಲಿ ಇಟ್ಟಿಗೆ ಸಮರ್ಪಣೆಗೆ ಮಾತ್ರ ಅವಕಾಶ ಇದ್ದುದರಿಂದ ಅದೇ ರಥದಲ್ಲಿ ಈ ಪಂಚಲೋಹದ ವಿಗ್ರಹವನ್ನು ವಾಪಾಸು ತರಲಾಗಿತ್ತು.

ಹಿಂದು ಏಕತಾ ಕೇಂದ್ರ ಉದ್ಘಾಟನೆ
ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ವಿವಿಧ ಪುಣ್ಯ ಕ್ಷೇತ್ರಗಳಿಂದ ತೀರ್ಥ ಸಂಗ್ರಹಿಸಿ 1983ರ ಡಿಸೆಂಬರ್‌ನಲ್ಲಿ ಉಜಿರೆಯಲ್ಲಿ ನಡೆದ ವಿಶ್ವಹಿಂದು ಪರಿಷತ್ತಿನ ರಾಜ್ಯ ಸಮ್ಮೇಳನದಲ್ಲಿ ಇರಿಸಲಾಗಿತ್ತು. ದೇಶದ ಹಲವು ಕೇಂದ್ರಗಳಲ್ಲಿ ಹಿಂದು ಏಕತಾ ಕೇಂದ್ರ ರಚಿಸುವ ಬಗ್ಗೆ ಈ ಸಮ್ಮೇಳನದಲ್ಲಿ ನಿರ್ಣಯಿಸಿದ್ದರಿಂದ ಗುರುವಾಯನಕೆರೆಯ ಶ್ರೀ ಪಾಂಡುರಂಗ ಮಂದಿರವನ್ನು ಹಿಂದು ಏಕತಾ ಕೇಂದ್ರವೆಂದು 1987 ಮಾರ್ಚ್‌ನಲ್ಲಿ ಘೋಷಿಸಿ ಉದ್ಧಾಟಿಸಲಾಗಿತ್ತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗೆಡೆಯವರ ನಿರ್ದೇಶನದಂತೆ ಅಂದು ರಾಮಶಿಲಾ ಪೂಜನ ಸಮಿತಿ ಅಧ್ಯಕ್ಷ ನೇತೃತ್ವದಲ್ಲಿ ಅಯೋಧ್ಯೆಗೆ ತೆರಳಿ ಬಂದಿದ್ದ ಶ್ರೀರಾಮ, ಸೀತೆ, ಲಕ್ಷ್ಮಣ ಪಂಚಲೋಹದ ವಿಗ್ರಹ ಗುರುವಾಯನಕೆರೆಯ ಹಿಂದು ಏಕತಾ ಕೇಂದ್ರದಲ್ಲಿರಿಸಿ(ಪ್ರತಿಷ್ಠಾಪನೆ ರಹಿತ)ಪೂಜೆ ನಡೆಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಜಿಲ್ಲೆಯ ಯಾವುದಾದರೊಂದು ಪ್ರದೇಶದಲ್ಲಿ ನೂತನ ಭಜನಾ ಮಂದಿರ ನಿರ್ಮಿಸಿದೇ ಆದಲ್ಲಿ ಅಲ್ಲಿ ಈ ವಿಗ್ರಹ ಪ್ರತಿಷ್ಠಾಪಿಸುವ ನಿರ್ಧಾರ ರಾಮಶಿಲಾ ಪೂಜನ ಸಮಿತಿ ಕೈಗೊಂಡಿದ್ದರು.

ಸುಬ್ರಹ್ಮಣ್ಯ ಮುಚ್ಚಿನ್ನಾಯರಿಂದ ಪ್ರತಿಷ್ಠಾಪನೆ
1989ರಲ್ಲಿ ಕರಾವಳಿಯಿಂದ ತೆರಳಿದ ರಥದಲ್ಲಿ ವಿಎಚ್‌ಪಿ ಯುವ ಮುಖಂಡನಾಗಿ ಕಣಿಯೂರಿನ ನಿವಾಸಿ ಸುಬ್ರಹ್ಮಣ್ಯ ಮುಚ್ಚಿನ್ನಾಯ ಇದ್ದರು. ಕಣಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಮುಖ ವೈದಿಕ ಕಾರ್ಯದಲ್ಲಿ ವರ ಕುಟುಂಬ ತೊಡಗಿಸಿಕೊಂಡಿದ್ದರಿಂದ ಗ್ರಾಮ ಮಟ್ಟದಲ್ಲೇ ಅಯೋಧ್ಯಾ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ 1991ರಲ್ಲಿ ಕಣಿಯೂರು ಕಸಬ ಎಂಬಲ್ಲಿ ಭಜನಾ ಮಂದಿರ ನಿರ್ಮಿಸಿದ್ದಾರೆ. ವಿಎಚ್‌ಪಿ ಮುಖಂಡ ಡಾ. ಗಂಗಾಧರ ಶೇಖರ ಎಂಬವರು ಗುರುವಾಯನಕೆರೆಯ ಹಿಂದು ಏಕತಾ ಕೇಂದ್ರಕ್ಕೆ ಲಿಖಿತ ಮನವಿ ಕೊಟ್ಟ ಬಳಿಕ ಶರತ್ತುಗಳೊಂದಿಗೆ ಈ ಭಜನಾ ಮಂದಿರಕ್ಕೆ ಹಸ್ತಾಂತರಿಸಲಾಯಿತು. ಪ್ರತೀ ದಿನ ಪೂಜೆ, ನೈವೇಧ್ಯ ನೀಡುವ ಶರತ್ತು ಇದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ಶನಿವಾರ ಮಾತ್ರ ಭಜನೆ ಸಹಿತ ಪೂಜಾ ಕಾರ್ಯಕ್ರಮ ನೆರವೇರುತ್ತಿದೆ.

1989ರಲ್ಲಿ ಕರಾವಳಿಯ ಜನತೆಯ ಜ್ಯೋತಕವಾಗಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅಯೋಧ್ಯೆಗೆ ತೆರಳಿದ ರಥದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಹೆಗ್ಗೆಯವರು ಕಳುಹಿಸಿದ ವಿಗ್ರಹ ಕಳುಹಿಸಲಾಗಿತ್ತು. ಆದರೆ ಇಟ್ಟಿಗೆ ಮಾತ್ರ ಪಡೆದು ವಿಗ್ರಹ ಸಹಿತ ರಥ ಅಯೋಧ್ಯೆಯಿಂದ ಹಿಂತಿರುಗಿತ್ತು. ನಂತರ ಮುಖಂಡರ ಅನುಮತಿ ಪಡೆದು ಕಣಿಯೂರು ಕಸಬ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಪುರೋಹಿತರೂ, ಹಿರಿಯ ವಿಎಚ್‌ಪಿ ಮುಖಂಡ, ಕರಸೇವೆ ಸಂದರ್ಭ ಅಯೋಧ್ಯೆಗೆ ತೆರಳಿದ ಕರಸೇವಕರಾದ ಸುಬ್ರಹ್ಮಣ್ಯ ಮುಚ್ಚಿನ್ನಾಯ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!