Tuesday, March 19, 2024
Homeಕರಾವಳಿವಕೀಲರಾದ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ; ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತರಲು...

ವಕೀಲರಾದ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ; ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತರಲು ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಆಗ್ರಹ

spot_img
- Advertisement -
- Advertisement -

ಬೆಳ್ತಂಗಡಿ : ವಕೀಲರಾದ ಕುಲದೀಪ್ ಶೆಟ್ಟಿ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದ್ದು ಇದಕ್ಕೆ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಆಕ್ರೋಶ ಹೊರ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ವಕೀಲರ ದಿನಾಚರಣೆಯ ಸಂದರ್ಭದಲ್ಲಿ ಪುಂಜಾಲಕಟ್ಟೆ ಪೋಲೀಸರು ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ದೌರ್ಜನ್ಯ ಎಸಗಿದ್ದು ಖoಡನೀಯ. ಹಾಗೂ ಅವರ ಮನೆಗೆ ನುಗ್ಗಿ ಮನೆಯಲ್ಲಿರುವವರನ್ನು ದೂಡಿ ಹಾಕಿದ್ದಲ್ಲದ್ದೆ, ಅವರ ಮೇಲೂ ಕೈ ಮಾಡುವ ಪ್ರಯತ್ನ ಮಾಡಿದ್ದಾರೆ. ಯಾವುದೋ ರಾಜಕೀಯ ಶಕ್ತಿಯ ಪ್ರಭಾವವನ್ನು ಬಳಸಿ ಪೋಲೀಸರು ತಮ್ಮ ವ್ಯಾಪ್ತಿ ಮೀರಿ ಒಬ್ಬ ವಕೀಲರನ್ನು ಮದ್ಯ ರಾತ್ರಿ ಕೊರಳ ಪಟ್ಟಿ ಹಿಡಿದು ಎಳೆದೊಯ್ದು ಅವರಿಗೆ ಥಳಿಸಿದ್ದಾರೆ ಇದರ ವಿರುದ್ಧ ವಕೀಲ ಸಮುದಾಯ ಧ್ವನಿ ಎತ್ತಬೇಕಾದುದು ಅತೀ ಅಗತ್ಯ ಎಂದಿದ್ದಾರೆ.

ದಿನನಿತ್ಯ ಪೋಲೀಸರು ವಕೀಲರ ವಿರುದ್ಧ ನಿರಂತರ ದೌರ್ಜನ್ಯ ಎಸಗುತ್ತ ಇದ್ದು ವಕೀಲರು ಸಮಾಜದಲ್ಲಿ ಗೌರವಯುಕ್ತವಾಗಿ ತಲೆ ಎತ್ತಿ ವೃತ್ತಿ ಜೀವನ ನಡೆಸಲು ಅಸಾಧ್ಯವಾಗುತ್ತಿದೆ.ತಕ್ಷಣ ಜಿಲ್ಲಾ ವಕೀಲರ ಮಿತ್ರರು ಈ ಘಟನೆಯನ್ನು ಖಂಡಿಸಬೇಕು ಮತ್ತು ಇನ್ನು ಮುಂದೆ ವಕೀಲ ಮಿತ್ರರ ಮೇಲೆ ಇಂತ ದೌರ್ಜನ್ಯ ನಡೆಯದಂತೆ ಕೈ ಜೋಡಿಸಬೇಕು. ಅದಲ್ಲದೇ ಸೋಮವಾರ ಮಂಗಳೂರಿನ ಎಲ್ಲ ವಕೀಲರು ಸೇರಿ ಇದರ ವಿರುದ್ದ ಪ್ರತಿಭಟನೆ ಮಾಡಬೇಕು ಇಲ್ಲವಾದರೆ ಪೋಲಿಸರ ದಬ್ಬಾಳಿಕೆಗೆ ಕೊನೆ ಇಲ್ಲದಾಗುತ್ತದೆ  ಆದಷ್ಟು ಬೇಗ ಪುಂಜಾಲಕಟ್ಟೆಯ ಸಬ್ ಇನ್ಸ್ಪೆಕ್ಟರ್ ಸಸ್ಪೆಂಡ್ ಆಗಬೇಕು ಇಲ್ಲವಾದಲ್ಲಿ ವಕೀಲ ಸಂಘದ ಮೂಲಕ ಬೃಹತ್ ಪ್ರತಿಭಟನೆ ನಡೆಸಬೇಕು ಈ ವಿಚಾರದಲ್ಲಿ ಎಲ್ಲಾ ವಕೀಲ ಮಿತ್ರರು ಒಂದಾಗೋಣ ಇಲ್ಲವಾದರೆ ವಕೀಲರಿಗೆ ರಕ್ಷಣೆ ಇಲ್ಲದ ಪೋಲೀಸ್ ಇಲಾಖೆಯಲ್ಲಿ ಸಾರ್ವಜನಿಕರಿಗೆ ರಕ್ಷಣೆ ಇರಲು ಸಾಧ್ಯವಿಲ್ಲ. ತಕ್ಷಣ  ವಕೀಲರ ಸಂರಕ್ಷಣ ಕಾಯಿದೆ ಜಾರಿ ತರಲು ಒತ್ತಾಯ ಮಾಡಬೇಕಾಗಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!