Saturday, May 18, 2024
Homeಕರಾವಳಿಶೀಘ್ರದಲ್ಲಿ ಜಕ್ರಿಬೆಟ್ಟುನಲ್ಲಿ ನೂತನ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್...

ಶೀಘ್ರದಲ್ಲಿ ಜಕ್ರಿಬೆಟ್ಟುನಲ್ಲಿ ನೂತನ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿಕೆ

spot_img
- Advertisement -
- Advertisement -

ಬಂಟ್ವಾಳ: ಶೀಘ್ರದಲ್ಲಿ 135 ಕೋ.ರೂ.ಗಳಲ್ಲಿ ಜಕ್ರಿಬೆಟ್ಟುನಲ್ಲಿ ನೂತನ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.

ಬಾಳ್ತಿಲ ಗ್ರಾ.ಪಂ.ಸಭಾಭವನದಲ್ಲಿ ಬಾಳ್ತಿಲ ಗ್ರಾಮ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ನಿರಂತರವಾಗಿ ಗ್ರಾಮಸ್ಥರು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದು, ಕ್ಷೇತ್ರದ ಪ್ರತಿ‌ ಗ್ರಾ.ಪಂ.ಗಳಿಗೆ ಕೋಟ್ಯಾಂತರ ರೂ.ಗಳ ಅನುದಾನ ನೀಡಲಾಗಿದೆ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೀವ ಉಳಿಸುವ ಜತೆಗೆ ಜೀವನದ ದಾರಿಯನ್ನೂ ಕಲ್ಪಿಸುವ ಕಾರ್ಯ ಮಾಡಿದ್ದಾರೆ. ದೇಶದ ಪ್ರತಿ ನಾಗರಿಕರಿಗೂ ಲಸಿಕೆ ನೀಡುವ ಮೂಲಕ ವ್ಯವಸ್ಥೆ ಕಲ್ಪಿಸುವ ಕಾರ್ಯವೂ ಪ್ರಧಾನಿಯವರಿಂದ ಆಗಿದೆ ಎಂದರು. ಇದೇ ವೇಳೆ ಆರ್.ಎಸ್.ಎಸ್.ಮುಂದಾಳು ಡಾ.ಪ್ರಭಾಕರ ಭಟ್ ಅವರು ಜತೆಗಿದ್ದು ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಗ್ರಾ.ಪಂ.ಅಧ್ಯಕ್ಷ ಹಿರಣ್ಮಯಿ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್., ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಹಿರಿಯರಾದ ಅನಂತ್ ಶೆಣೈ ಕಂಟಿಕ, ಕೃಷ್ಣಪ್ಪ ಪೂಜಾರಿ, ಕ.ಕೃಷ್ಣಪ್ಪ, ಬೂತ್ ಅಧ್ಯಕ್ಷ ರವಿ, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಗ್ರಾ.ಪಂ.ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಲತೀಶ್ ಕುರ್ಮಾನ್, ಮಮತಾ, ರಂಜಿನಿ, ಶಿವರಾಜ್, ಪ್ರಮುಖರಾದ ಉಮೇಶ್ ಅರಳ, ಸುದರ್ಶನ್ ಬಜ, ರಮೇಶ್ ಕುದ್ರೆಬೆಟ್ಟು, ಲಕ್ಷ್ಮೀ ಗೋಪಾಲ ಆಚಾರ್ಯ, ಗೋಪಾಲ ಶೆಣೈ ಕಂಟಿಕ, ಗಣೇಶ್ ರೈ ಮಾಣಿ, ಯಶವಂತ ನಾಯ್ಕ್ ನಗ್ರಿ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ರಾಮಣ್ಣ ಶೆಟ್ಟಿ, ಸುಂದರ ಸಾಲಿಯಾನ್, ಪಿಡಿಒ ಅಭಿವೃದ್ಧಿ ಅಧಿಕಾರಿ ಸಂಧ್ಯಾ, ಮೇಲ್ವಿಚಾರಕಿ ಶೋಭಾ, ಗ್ರಾಮಕರಣಿಕ ಯಶ್ವಿತಾ, ರಾಧಾಕೃಷ್ಣ ಅಡ್ಯಂತಾಯ, ರಾಜೇಂದ್ರ ಹೊಳ್ಳ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬಾಳ್ತಿಲ  ಗ್ರಾಮದ ಕುದ್ರೆಬೆಟ್ಟು ಶಾಲಾ ಬಳಿ 01 ಕೋ.ರೂ.ವೆಚ್ಚದ ಕುದ್ರೆಬೆಟ್ಟು ಬೈಲು ಕಂಪನಬೈಲು ರಸ್ತೆ ಕಾಮಗಾರಿ, ಬಾಳ್ತಿಲ ಬೀಡು ಕಲ್ಲಾಪು ರಸ್ತೆ ಅಭಿವೃದ್ಧಿ ‌10 ಲಕ್ಷ ರೂ., ನಾರ್ಣಪಾಲು ರಸ್ತೆ ಅಭಿವೃದ್ಧಿ 10 ಲಕ್ಷ ರೂ., ಹನುಮಾನ್ ನಗರ- ಕುರ್ಮಾನ್ ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಏಳ್ತಿಮಾರು- ನಡುಕೋಡಿ ರಸ್ತೆ 10 ಲಕ್ಷ ರೂ., ಮುಲಾರು ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಬಾಳ್ತಿಲ ಗ್ರಾ.ಪಂ.ಉದ್ಯಾನವನ 7 ಲಕ್ಷ ರೂ. ಕಾಮಗಾರಿಗಳಿಗೆ ಶಿಲಾನ್ಯಾಸ, ಕಶೆಕೋಡಿ ಅಂಗನವಾಡಿ ಕಟ್ಟಡ, ಬಾಳ್ತಿಲ ಗ್ರಾ.ಪಂ. ಎನ್.ಆರ್.ಎಲ್.ಎಂ. ಕಟ್ಟಡ ಉದ್ಘಾಟನೆ 13 ಲಕ್ಷ ರೂ, ನೀರಪಾದೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿರ್ಮಾಣಗೊಂಡ ‌ಜಲಜೀವನ್ ಮಿಷನ್ ವತಿಯಿಂದ 69 ಲಕ್ಷ ರೂ. ಅನುದಾನದ ನೀರಿನ ಟ್ಯಾಂಕ್ ಉದ್ಘಾಟನೆ, ಗ್ರಾ.ಪಂ.ನ 9 ಲಕ್ಷ ರೂ.ಗಳ ಸ್ವಚ್ಛತಾ ವಾಹನಕ್ಕೆ ಚಾಲನೆ ನೀಡಲಾಯಿತು.

- Advertisement -
spot_img

Latest News

error: Content is protected !!