Saturday, May 18, 2024
Homeಕರಾವಳಿಚುನಾವಣಾ ಸೋಲಿಗೆ ಸೇಡು ತೀರಿಸಿಕೊಂಡನೇ ಕಾಂಗ್ರೆಸ್ ಮುಖಂಡ? : ನೈತಿಕ ಪೊಲೀಸ್ ಗಿರಿ ಆರೋಪದಡಿ...

ಚುನಾವಣಾ ಸೋಲಿಗೆ ಸೇಡು ತೀರಿಸಿಕೊಂಡನೇ ಕಾಂಗ್ರೆಸ್ ಮುಖಂಡ? : ನೈತಿಕ ಪೊಲೀಸ್ ಗಿರಿ ಆರೋಪದಡಿ ರಾಜೇಶ್ ಭಟ್ ಸವಣಾಲು ಸೇರಿ ಐವರ ಬಂಧನ , ಹಲ್ಲೆಗೊಳಗಾದವರ ಸ್ಥಿತಿ ಗಂಭೀರ

spot_img
- Advertisement -
- Advertisement -

ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಸಂಬಂಧಿಕರ ಮನೆಗೆ ಹೋಗಿ, ಊಟ ಮಾಡಿ ವಾಪಸ್ ಬರುವಾಗ ದನ ಕಳ್ಳರು ಎಂದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟಿನಲ್ಲಿ ನಡೆದಿದ್ದು, ಪ್ರಕರಣದಲ್ಲಿ ಭಾಗಿಯಾದ , ಕಾಂಗ್ರೆಸ್ ಮುಖಂಡ ರಾಜೇಶ್ ಭಟ್ ಸವಣಾಲು ಸೇರಿ ಐವರ ಬಂಧನ ಹಾಗು ಇತತರ ಮೇಲೆ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ರಾಜೇಶ್ ಭಟ್ ಸವಣಾಲು


ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ ರಹಿಮಾನ್(55) ನಿನ್ನೆ ಬುಧವಾರ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ಬಾಡಿ ಕೆಲಸ ಮಾಡಿಸಲು ಬಂದಿದ್ದು ಜೊತೆಗೆ ಕುಪ್ಪೆಟ್ಟಿಯ ಮುಸ್ತಾಫಾ(40) ಕರೆದುಕೊಂಡು ಬಂದಿದ್ದರು ಆದ್ರೆ ಕೆಲಸ ಮಾಡಲು ಅಗಿಲ್ಲ ನಂತರ ರಹಿಮಾನ್ ತನ್ನ ಸಂಬಂಧಿಕರ ಮನೆಯಾದ ಸವಣಾಲಿಗೆ ಹೋಗಿ ಊಟ ಮಾಡಿ ವಾಪಸ್ ಬರುವಾಗ ಸವಣಾಲಿನಿಂದ ಬೈಕ್ ,ಕಾರುಗಳಲ್ಲಿ ಬೆನ್ನಟ್ಟಿದ್ದಾರೆ ಮೇಲಂತಬೆಟ್ಟು ಬರುತ್ತಿದ್ದಂತೆ ಎದುರಿನಿಂದ ಬೈಕ್ ನಲ್ಲಿ ಬರುತ್ತಿದ್ದ ದುಷ್ಪರ್ಮಿಗಳು ಪಿಕಪ್ ಅಡ್ಡಗಟ್ಟಿ ನೀವು ದನ ಕಳ್ಳರು, ನಮ್ಮ ಊರಿನಿಂದ ದನ ಕಳ್ಳತನ ಮಾಡಲು ಬಂದಿದ್ದಿರಿ ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಪಿಕಪ್ ನಲ್ಲಿದ್ದ ರಹಿಮಾನ್ ಮತ್ತು ಮುಸ್ತಫಾ ಮೇಲೆ 50 ಕ್ಕೂ ಅಧಿಕ ದುಷ್ಕರ್ಮಿಗಳು ರಾಡ್ , ಮಾರಖಾಯುಧಗಳಿಂದ ಮಾನಸೋ ಇಚ್ಚೆ ದಾಳಿ ಮಾಡಿದ್ದಾರೆ. ದಾಳಿಯಿಂದ ರಹಿಮಾನ್ ಒಂದು ಕಣ್ಣಿಗೆ ಗಾಯವಾಗಿದ್ದು ದೇಹದ ಎಲ್ಲಾ ಭಾಗಕ್ಕೆ ಗಂಭಿರ ಹಲ್ಲೆ ಮಾಡಿದ್ದಾರೆ. ಮುಸ್ತಾಫಾಗೂ ಗಾಯವಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ಸ್ಥಳಿಯರು ನೀಡಿದ್ದು ಪೊಲೀಸರು ಬಂದು ಗುಂಪು ಚದುರಿಸಿ ಗಾಯಗೊಂಡ ಇಬ್ಬರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದ್ದೊಯ್ಯಲಾಗಿದೆ .
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾಜೇಶ್ ಭಟ್ ಸವಣಾಲು, ಸಾಬು , ರಾಕೇಶ್ ಭಟ್, ಗುರುಪ್ರಸಾದ್ ,ಕುಮಾರ್ ,ಲಕ್ಷ್ಮಣ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದ್ದು ಇನ್ನು ಹೆಚ್ಚಿನ ತನಿಖೆಯನ್ನು ವೃತ್ತ ನಿರೀಕ್ಷಕ ಸಂದೇಶ್ ಪಿಜಿ ಮತ್ತು ಉಪ ನಿರೀಕ್ಷಕ ನಂದಕುಮಾರ್ ಅವರ ನೇತೃತ್ವದ ಪೊಲೀಸ್ ತಂಡ ನಡೆಸುತ್ತಿದೆ ಎಂದು ತಿಳಿದು ಬಂದಿದೆ .
ಮೊದಲೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿ , ಅನೇಕ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಕಾಂಗ್ರೆಸ್ ಮುಖಂಡ ರಾಜೇಶ್ ಭಟ್ ಸವಣಾಲು ಅವರು ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ದಿಸಿ , ಮುಸ್ಲಿಂ ಸಮುಧಾಯದ ವ್ಯಕ್ತಿಯೋರ್ವರ ತುಳುನಾಡ ಪಕ್ಷದ ಸ್ಪರ್ಧೆಯಿಂದ ಸೋಲುಂಡಿದ್ದು , ಇದರ ಪ್ರತಿಕಾರವಾಗಿ ಅಮಾಯಕರ ಮೇಲೆ ಈ ನೈತಿಕ ಪೊಲೀಸ್ ಗಿರಿ ಮಾಡಿದ್ದಾರೆ ಎಂದು ಸ್ಥಳೀಯ ವ್ಯಕ್ತಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ .

- Advertisement -
spot_img

Latest News

error: Content is protected !!