Wednesday, May 15, 2024
HomeUncategorizedಕೊರೊನಾ ಗೆದ್ದ ಬೆಳ್ತಂಗಡಿಯ ಯುವತಿಗೆ ಸಹಾಯಹಸ್ತ ನೀಡಿದ ರಾಜಕೇಸರಿ ಸಂಘಟನೆ

ಕೊರೊನಾ ಗೆದ್ದ ಬೆಳ್ತಂಗಡಿಯ ಯುವತಿಗೆ ಸಹಾಯಹಸ್ತ ನೀಡಿದ ರಾಜಕೇಸರಿ ಸಂಘಟನೆ

spot_img
- Advertisement -
- Advertisement -

ಬೆಳ್ತಂಗಡಿ: ಕೊರೊನಾ ಗೆದ್ದು ಬಂದ ಕುಟುಂಬಕ್ಕೆ ರಾಜಕೇಸರಿ ಸಂಘಟನೆ ಸಹಾಯ ಹಸ್ತ ನೀಡುವ  ಮೂಲಕ ಮಾನವೀಯತೆ ಮೆರೆದಿದೆ. ಈ ಮೂಲಕ ಉಳಿದ ಸಂಘಟನೆಗಳಿಗೆ ಮಾದರಿಯಾಗಿದೆ.

ಉಜಿರೆಯ ಖಾಸಗಿ ಸಂಸ್ಥೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಯುವತಿಯೊಬ್ಬರಿಗೆ ಇತ್ತೀಚೆಗೆ ಕೋವಿಡ್ ದೃಢಪಟ್ಟಿತ್ತು. ಆ ಬಳಿಕ ಅವರು ಆಸ್ಪತ್ರೆಗೆ ದಾಖಲಾಗಿ ಇದೀಗ ಗುಣಮುಖರಾಗಿ ಮನೆಗೆ ವಾಪಾಸ್ಸಾಗಿದ್ದಾರೆ. ಮುಂಡಾಜೆ ಗ್ರಾಮದ ಅಗರಿಯ ಈ ಯುವತಿಯ ಕುಟುಂಬಕ್ಕೆ ರಾಜಕೇಸರಿ ಸಂಘಟನೆ ನೆರವಾಗಿದೆ.

ಸಂಘಟನೆಯ ಸದಸ್ಯರು ಇಂದು ಸಂತ್ರಸ್ತರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಜೊತೆಗೆ 25 ಕೆ.ಜಿ ಅಕ್ಕಿ, ದಿನಸಿ ಸಾಮಗ್ರಿಗಳು, 2 ಸಾವಿರ ರೂ. ನಗದು ಹಸ್ತಾಂತರ ಮಾಡಿದ್ದಾರೆ. ಕುಟುಂಬದ ಸದಸ್ಯೆ ಕೊರೊನಾದಿಂದ ಕೂಲಿ ಮಾಡಲಾಗದೆ ಸಂಕಷ್ಟಕ್ಕೆ ಗುರಿಯಾಗಿದ್ದರೆ, ಮನೆಯಲ್ಲಿ ವೃದ್ಧೆ ತಾಯಿ ಕೂಡಾ ಇದ್ದಾರೆ. ಪತಿ ಚಾಲಕರಾಗಿದ್ದರೂ ಕೂಡಾ ಸೀಲ್ ಡೌನ್ ಕಾರಣದಿಂದ ಕೂಲಿ ಮಾಡಲಾಗದೆ ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದರು. ಅಖಿಲ ಕರ್ನಾಟಕ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಅವರ ನೇತೃತ್ವದ ನಿಯೋಗದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಕಾರ್ತಿಕ್, ಕಾರ್ಯದರ್ಶಿ ಅನಿಲ್, ಉಜಿರೆ ಘಟಕದ ಸಂಚಾಲಕ ಪ್ರವೀಣ್, ಕಾರ್ಯತ್ತಡ್ಕ ಘಟಕ ಸಾಮಾಜಿಕ ಜಾಲತಾಣದ ಸುಮಂತ್ ಹಾಗೂ ಸದಸ್ಯರಾದ ಶರಣ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!