ಮುಂಬೈ: ಅಶ್ಲೀಲ ಚಿತ್ರ ನಿರ್ಮಿಸಿದ ಆರೋಪದಡಿ ರಾಜ್ ಕುಂದ್ರಾ ಅವರನ್ನು ಬಂಧಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದರ ಬೆನ್ನಲ್ಲೇ ಇದೀಗ ರಾಜ್ ಕುಂದ್ರಾ ಅವರು ಈ ಹಿಂದೆ ಕಪಿಲ್ ಶರ್ಮಾ ಕಾರ್ಯಕ್ರಮದಲ್ಲಿ ನೀಡಿದ ಉತ್ತರವೊಂದು ವೈರಲ್ ಆಗಿದೆ.
ಹೌದು… ಆ ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ, ರಾಜ್ ಕುಂದ್ರಾ ಅವರನ್ನು ಯಾವಾಗಲೂ ಪಾರ್ಟಿ ಮಾಡುತ್ತಿರುತ್ತೀರಿ, ಸ್ಟಾರ್ಗಳೊಂದಿಗೆ ಫುಟ್ಬಾಲ್ ಆಡುತ್ತಿರುತ್ತೀರಿ, ನಿಮ್ಮ ಪತ್ನಿಯನ್ನು(ಶಿಲ್ಪಾ ಶೆಟ್ಟಿ) ಶಾಪಿಂಗ್ಗೆ ಕರೆದೊಯ್ಯುತ್ತೀರಿ. ಇಷ್ಟೆಲ್ಲಾ ಬಿಂದಾಸ್ ಆಗಿದ್ದಾಗ್ಯೂ ಅಷ್ಟು ದುಡ್ಡನ್ನು ಹೇಗೆ ಸಂಪಾದಿಸುತ್ತೀರಿ ಎಂದು ಕೇಳಿದ್ದರು.
ಈ ಪ್ರಶ್ನೆಗೆ ವೇದಿಕೆಯಲ್ಲಿದ್ದ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಮತ್ತು ಶಿಲ್ಪಾ ಅವರ ಸಹೋದರಿ ಶಮಿತಾ ಶೆಟ್ಟಿ ಮೂವರೂ ಜೋರಾಗಿ ನಗುತ್ತಾರೆ. ಕೊನೆಗೆ ಶಿಲ್ಪಾ ಶೆಟ್ಟಿ ಅದಕ್ಕೆ ಉತ್ತರ ನೀಡಿ, ಇಲ್ಲಾ; ಅವರು ತುಂಬಾ ಕಷ್ಟ ಪಡುತ್ತಾರೆ. ಕೆಲವೊಮ್ಮೆ ಅವರು ಕೆಲಸಕ್ಕೆ ಕೂತರೆ ಗಂಟೆಗಟ್ಟಲೆ ಏಳುವುದಿಲ್ಲ ಎಂದು ಉತ್ತರಿಸಿದ್ದರು. ಅಂದು ಕಪಿಲ್ ಶರ್ಮಾ ಅವರ ಹಾಸ್ಯ ಭರಿತ ಪ್ರಶ್ನೆಗೆ ಎಲ್ಲರೂ ನಕ್ಕಿದ್ದು ಹೌದಾದರೂ, ಆ ವಿಡಿಯೊ ಈಗ ವೈರಲ್ ಆಗಿದೆ. ರಾಜ್ ಕುಂದ್ರಾ ಅವರ ಮೇಲಿನ ಆರೋಪದಿಂದಾಗಿ ಆ ವಿಡಿಯೊ ಈಗ ಬೇರೆಯದೇ ಅರ್ಥ ಪಡೆದುಕೊಂಡಿದೆ.