Friday, June 5, 2026
Homeತಾಜಾ ಸುದ್ದಿಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನ ಮೊಬೈಲು ಕಸಿದುಕೊಳ್ಳಲು ಬಂದ ಕಳ್ಳ: ಅವನ‌ ಎರಡೂ ಕೈ ಹಿಡಿದುಕೊಂಡು ಕಿಟಕಿಯಲ್ಲಿ...

ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನ ಮೊಬೈಲು ಕಸಿದುಕೊಳ್ಳಲು ಬಂದ ಕಳ್ಳ: ಅವನ‌ ಎರಡೂ ಕೈ ಹಿಡಿದುಕೊಂಡು ಕಿಟಕಿಯಲ್ಲಿ ನೇತಾಡಿಸಿಕೊಂಡು 10 ಕಿ.ಮೀ ಸಾಗಿದ ಪ್ರಯಾಣಿಕ

- Advertisement -
- Advertisement -

ಪಾಟ್ನಾ: ರೈಲು ಪ್ರಯಾಣಿಕರಿಂದ  ಕಿಟಕಿಯ ಮೂಲಕ ಮೊಬೈಲ್ ಫೋನ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿ ಬಳಿಕ‌ ತಾನೇ ಸಂಕಷ್ಟಕ್ಕೆ ಸಿಲುಕಿರುವ ಘಟನೆ
ಬಿಹಾರದಲ್ಲಿ  ನಡೆದಿದೆ.
ಸೆ.14 ರಂದು  ಬೇಗುಸರಾಯ್‌ನಿಂದ ಖಗರಿಯಾಗೆ ಹೋಗುತ್ತಿದ್ದಾಗ ರೈಲಿನಲ್ಲಿ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಮೊಬೈಲ್ ಕಸಿಯಲು ರೈಲಿನ ಕಿಟಕಿಯೊಳಗೆ ಕೈ ಹಾಕಿದ್ದಾನೆ. ಆದರೆ ಎಚ್ಚೆತ್ತ ಪ್ರಯಾಣಿಕ ಅವನ ಕೈಯನ್ನು ಹಿಡಿದುಕೊಂಡಿದ್ದಾನೆ.  ಅವನ ಎರಡೂ ಕೈಗಳನ್ನು ಹಿಡಿದುಕೊಂಡಿದ್ದು ಆತ ಕಿಟಕಿಯಲ್ಲಿ ನೇತಾಡುವಂತೆ ಮಾಡಿದ್ದಾನೆ.

ರೈಲು ಚಲಿಸುತ್ತಿದ್ದಂತೆ ಆತ ಕೈ ಬಿಡುವಂತೆ ಮನವಿ ಮಾಡಿದ್ದಾನೆ. ರೈಲು ಸ್ವಲ್ಪ ದೂರ ಪ್ರಯಾಣಿಸಿದ ನಂತರ ಪ್ರಯಾಣಿಕ ಆತನ ಕೈ ಬಿಟ್ಟಿದ್ದಾನೆ.

ಸುಮಾರು 10 ಕಿಮಿಗಳಷ್ಟು ದೂರ ಆತ ರೈಲಿನ ಕಿಟಕಿ ಬದಿಯಲ್ಲಿ ನೇತಾಡುತ್ತಾ ಪ್ರಯಾಣಿಸಿದ್ದಾನೆ. ಕೊನೆಗೆ ಖಗರಿಯಾ ಬಳಿ ಬಂದಾಗ ಆತನನ್ನು ಬಿಡಲಾಗಿದೆ. ತಕ್ಷಣವೇ ಆತ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

- Advertisement -

Latest News

error: Content is protected !!