ಮಂಗಳೂರು, ಜು.18: ನಗರ ಹೊರವಲಯದ ಕುಲಶೇಖರ ಬಳಿ ರೈಲ್ವೆ ಹಳಿಗೆ ತಡೆಗೋಡೆ ಸಹಿತ ಮಣ್ಣು ಕುಸಿದು ಸ್ಥಗಿತಗೊಂಡಿದ್ದ ರೈಲು ಸಂಚಾರ ರವಿವಾರ ಬೆಳಗ್ಗಿನಿಂದ ಪುನರಾರಂಭಗೊಂಡಿದೆ.
ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಲಶೇಖರ್-ಪಡೀಲ್ ನಿಲ್ದಾಣಗಳ ಮಧ್ಯೆ ಭೂ ಕುಸಿತ ಉಂಟಾಗಿ ತಡೆಗೋಡೆ ಸಹಿತ ಭಾರೀ ಪ್ರಮಾಣದಲ್ಲಿ ಮಣ್ಣು ರೈಲ್ವೆ ಹಳಿಗಳ ಮೇಲೆ ಬಿದ್ದಿತ್ತು, ಈ ಹಿನ್ನಲೆ ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕ ರೈಲನ್ನು ರದ್ದುಗೊಳಿಸಲಾಗಿದ್ದು, ಹಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು.
ಹಳಿ ಮೇಲೆ ಬಿದ್ದ ಕಲ್ಲುಮಣ್ಣಿನ ತೆರವು ಕಾರ್ಯಾಚರಣೆ ಶನಿವಾರ ತಡರಾತ್ರಿಯವರೆಗೂ ನಡೆದಿದ್ದು, ತಡೆಗೋಡೆ ಕುಸಿತಗೊಂಡ ಸ್ಥಳದಿಂದ ಮಣ್ಣು, ಬೃಹತ್ ಗಾತ್ರದ ಕಲ್ಲುಗಳನ್ನು ಹಿಟಾಚಿ ಬಳಸಿ ತೆರವುಗೊಳಿಸಲಾಯಿತು. ರೈಲ್ವೆ ಹಳಿಗೆ ವಾಲಿದ ತಡೆಗೋಡೆಯನ್ನು ಯಂತ್ರ ಬಳಸಿ ತುಂಡರಿಸಿ ತೆಗೆಯಲಾಯಿತು
ರವಿವಾರ ಬೆಳಗ್ಗೆ 8:45ರ ವೇಳೆಗೆ ಎರ್ನಾಕುಲಂನಿಂದ ಅಜ್ಮೀರ್‌ಗೆ ಮೊದಲ ರೈಲು ಪ್ರಯಾಣ ಬೆಳೆಸಿತು. ಮಣ್ಣು ಕುಸಿತಗೊಂಡ ಕುಲಶೇಖರ ಪ್ರದೇಶದಲ್ಲಿ ರೈಲು ತೆರಳುವ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದು, ವೀಕ್ಷಣೆ ಮಾಡಿದರು
ಕುಲಶೇಖರದಲ್ಲಿ ಹಳಿ ಮೇಲೆ ಬಿದ್ದ ಮಣ್ಣು ತೆರವು: ರೈಲು ಸಂಚಾರ ಪುನರಾರಂಭ!!
- Advertisement -
![]()
- Advertisement -
- Advertisement -


