Saturday, June 6, 2026
Homeಕರಾವಳಿಮಂಗಳೂರುಮಂಗಳೂರು: ಮಳೆಯಿಂದಾಗಿ ಬ್ಯಾಂಕ್ ನೊಳಗೆ ಬಂದ ಹೆಬ್ಬಾವು ಮರಿ

ಮಂಗಳೂರು: ಮಳೆಯಿಂದಾಗಿ ಬ್ಯಾಂಕ್ ನೊಳಗೆ ಬಂದ ಹೆಬ್ಬಾವು ಮರಿ

- Advertisement -
- Advertisement -

ಮಂಗಳೂರು: ಎಡೆಬಿಡದೇ ಸುರಿದ ಮಳೆಯಿಂದಾಗಿ ಮಂಗಳೂರು ನಗರದಲ್ಲಿ ಬ್ಯಾಂಕ್ ನಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡಿದೆ.

ಕೊಡಿಯಾಲ್ ಬೈಲ್ ನಲ್ಲಿರುವ ಯೂನಿಯನ್ ಬ್ಯಾಂಕ್ ನಲ್ಲಿ ಮರಿ ಹೆಬ್ಬಾವು ಕಾಣಿಸಿಕೊಂಡಿದ್ದು, ಬ್ಯಾಂಕ್ ನ ಎಸಿ ಪ್ಯಾನಲ್ ಒಳಗೆ ಸೇರಿಕೊಂಡಿತ್ತು.

ನಂತರ ಬ್ಯಾಂಕ್ ಸಿಬ್ಬಂದಿ ಉರಗ ತಜ್ಞ ಗಂಗೇಶ್ ಬೋಳಾರ್ ಅವರಿಗೆ ಮಾಹಿತಿ ನೀಡಿದ್ದು, ನಂತರ ಗಂಗೇಶ್ ಬೋಳಾರ್ ಬ್ಯಾಂಕ್ ಗೆ ಬಂದು ಎಸಿ ಪ್ಯಾನಲ್ ಒಳಗಿನಿಂದ ಹೆಬ್ಬಾವು ಮರಿ‌ಯನ್ನು ಹೊರಗೆ ತೆಗೆದಿದ್ದಾರೆ.

ಬ್ಯಾಂಕ್ ಒಳಗೆ ಹೆಬ್ಬಾವು ಮರಿ ಕಾಣಿಸಿಕೊಂಡ ಕಾರಣ ಸಿಬ್ಬಂದಿ ಕೆಲವು ಹೊತ್ತು ಆತಂಕಕ್ಕೊಳಗಾಗಿದ್ದರು.

- Advertisement -

Latest News

error: Content is protected !!