Tuesday, May 7, 2024
Homeಕ್ರೀಡೆಟೋಕಿಯೋ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಸೆಮಿ ಫೈನಲ್ ಗೆ ಲಗ್ಗೆ!!

ಟೋಕಿಯೋ ಒಲಿಂಪಿಕ್ಸ್: ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಸೆಮಿ ಫೈನಲ್ ಗೆ ಲಗ್ಗೆ!!

spot_img
- Advertisement -
- Advertisement -

ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಪಿವಿ ಸಿಂಧು ಜಪಾನಿನ ಅಕೇನ್ ಯಮಗುಚಿ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಜಪಾನ್ ನ, ವಿಶ್ವ ನಂ. 4 ನೇ ಶ್ರೇಯಾಂಕಿತೆ ಯಮಗುಚಿ ವಿರುದ್ಧ 21-13, 22-20 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಶುಕ್ರವಾರ 56 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನ ಒಂದು ಹಂತದಲ್ಲಿ ಸಿಂಧು ಎರಡು ಅಂಕಗಳ ಹಿನ್ನಡೆಯಲ್ಲಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಒತ್ತಡ ನಿಭಾಯಿಸಲು ಯಶಸ್ವಿಯಾದ ಸಿಂಧು ಎದುರಾಳಿಗೆ ಸೆಡ್ಡು ಹೊಡೆದ, ಪರಿಣಾಮ ಸ್ಕೋರ್ 20-20 ಕ್ಕೆ ಬಂದು ನಿಂತಿತು. ಈ ಹಂತದಲ್ಲಿ ಮತ್ತೆ ಸಿಂಧು ತಮ್ಮೆಲ್ಲಾ ಅನುಭವದ ಧಾರೆಯೆರೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.

- Advertisement -
spot_img

Latest News

error: Content is protected !!