Wednesday, June 24, 2026
Homeಕರಾವಳಿಮಂಗಳೂರುಪುತ್ತೂರು: ಕರಿಮೆಣಸು ಕೊಯ್ಯುವಾಗ ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾ*ವು

ಪುತ್ತೂರು: ಕರಿಮೆಣಸು ಕೊಯ್ಯುವಾಗ ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾ*ವು

- Advertisement -
- Advertisement -

ಪುತ್ತೂರು: ಕರಿಮೆಣಸು ಕೊಯ್ಯುವಾಗ ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾ*ವನ್ನಪ್ಪಿರುವ ಘಟನೆ ಬೆಟ್ಟಂಪಾಡಿ ಎಂಬಲ್ಲಿ ಜನವರಿ 19 ರಂದು ನಡೆದಿದೆ. ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಮೃತರು.

ಜನವರಿ 19 ರಂದು ಬೆಳಗ್ಗೆ ನಾರಾಯಣ ನಾಯ್ಕ ತಮ್ಮ ಮನೆ ಮುಂದೆಯಿದ್ದ ತೆಂಗಿನ ಮರದಲ್ಲಿ ಬೆಳೆದಿದ್ದ ಕಾಳು ಮೆಣಸನ್ನು ಅಲ್ಯೂಮಿನಿಯಂ ಏಣಿ ಏರಿ ಕೊಯ್ಯುತ್ತಿದ್ದಾಗ ಏಣಿ ಸಹಿತ ಅವರು ಮರದಿಂದ ಜಾರಿ ಬಿದ್ದಿದ್ದಾರೆ. ಘಟನೆಯಿಂದ ನಾರಾಯಣ ನಾಯ್ಕರವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!