Tuesday, April 16, 2024
Homeಕರಾವಳಿಸುಳ್ಯ: 8 ಕೋಟಿ ಮೌಲ್ಯದ ಎರಡು ತಲೆಯ ಹಾವು ಮಾರಾಟ ಜಾಲ ಪೊಲೀಸರ ಬಲೆಗೆ

ಸುಳ್ಯ: 8 ಕೋಟಿ ಮೌಲ್ಯದ ಎರಡು ತಲೆಯ ಹಾವು ಮಾರಾಟ ಜಾಲ ಪೊಲೀಸರ ಬಲೆಗೆ

spot_img
- Advertisement -
- Advertisement -

ಪುತ್ತೂರು: ಸುಳ್ಯ ತಾಲೂಕಿನ ಮಂಡೆಕೊಲು ಗ್ರಾಮದ ಮೂರೂರು ಎಂಬಲ್ಲಿ ಕೇರಳ ನೊಂದವಣೆಯ ಎರಡು ಸ್ವೀಪ್ಟ್ ಕಾರಿನಲ್ಲಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೈಯನೂರಿನಿಂದ 8 ಕೋಟಿ ಮೌಲ್ಯದ 54 ಇಂಚು ಉದ್ದ ಮತ್ತು 12 ಇಂಚು ದಪ್ಪದ ಒಂದು ಇರ್ತಾಳೆ ಹಾವು (ಎರಡು ತಲೆಯ ಹಾವು) ನ್ನು ಮಾರಾಟ ಮಾಡಲು ಬರುತ್ತಿದ್ದಾಗ ಖಚಿತ ಮಾಹಿತಿ ಆಧಾರಲ್ಲಿ ಪುತ್ತೂರು ಅರಣ್ಯ ಸಂಚಾರಿ ದಳದ ಪೊಲೀಸರು ಕಾಸರಗೋಡು -ಸುಳ್ಯದ ರಸ್ತೆಯ ಮಂಡೆಕೋಲು ಗ್ರಾಮದ ಮುರೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪತ್ತೆ ಹಚ್ಚಿ ವಶಪಡಿಸಿಕೊಂಡು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ಕಾಸರಗೋಡು ಜಿಲ್ಲೆಯ ಪೈಯನೂರಿನ ಜಬ್ಬರ್(42) , ಆಶ್ರಫ್(42) , ರಾಜೇಶ್(46) , ರಮೇಶನ್(43) , ಬಿಪಿನ್ (38) ಬಂಧಿಸಲಾಗಿದೆ. ಬಂಧಿತರಿಂದ ಒಂದು ಇರ್ತಾಳೆ ಹಾವು , ಒಂದು ಹಣ ಲೆಕ್ಕ ಮಾಡುವ ಮೇಷಿನ್ , ಮೊಬೈಲ್ ಫೋನ್ , ಎರಡು ಸ್ವೀಪ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ.

ಐದು ಜನ ಆರೋಪಿಗಳನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪುತ್ತೂರು ಅರಣ್ಯ ಸಂಚಾರಿ ದಳದ ಪಿಎಸ್ಐ ಜಾನಕಿ , ಸುಂದರ್ ಶೆಟ್ಟಿ , ವಿಜಯ್ ಸುವರ್ಣ, ಉದಯ್ , ಸಂತೋಷ್ , ಸರಸ್ವತಿ ಕಾರ್ಯಾಚರಣೆಯಲ್ಲಿ ಪಾಲ್ಗೋಂಡಿದ್ದರು.

- Advertisement -
spot_img

Latest News

error: Content is protected !!