Tuesday, July 1, 2025
Homeಕರಾವಳಿಮಂಗಳೂರುಪುತ್ತೂರು; ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣ; ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ...

ಪುತ್ತೂರು; ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣ; ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜು.3 ಕ್ಕೆ ಮುಂದೂಡಿಕೆ

spot_img
- Advertisement -
- Advertisement -

ಪುತ್ತೂರು; ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂಕೆ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಜು.3 ಕ್ಕೆ ಮುಂದೂಡಿಕೆಯಾಗಿದೆ.

ತನ್ನ ಸಹಪಾಠಿ ವಿದ್ಯಾರ್ಥಿನ್ನು ಪುತ್ತೂರು ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್‌ (21) ಮದುವೆಯಾಗುವುದಾಗಿ ನಂಬಿಸಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ಕರೆಸಿ, ದೈಹಿಕ ಸಂಪರ್ಕ ಬೆಳೆಸಿ, ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆರೋಪಿ ಮದುವೆಯಾಗಲು ನಿರಾಕರಣೆ ಮಾಡಿ ವಂಚನೆ ಮಾಡಿರುವ ಕುರಿತು ಸಂತ್ರಸ್ತೆ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಆರೋಪಿ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ಈ ಮಧ್ಯೆ ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಮಂಗಳೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜೂ.30 ರಂದು ನಡೆದಿದ್ದು ಮುಂದಿನ ವಿಚಾರಣೆಯನ್ನು ಜು.3 ಕ್ಕೆ ಮುಂದೂಡಲಾಗಿದೆ.

- Advertisement -
spot_img

Latest News

error: Content is protected !!