Monday, May 17, 2021
Homeಕರಾವಳಿಪುತ್ತೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಕೊರೋನಾಗೆ ಬಲಿ- ಶಾಸಕರ ಸಹಾಯದಿಂದ ಪುತ್ತೂರಿಗೆ ತಂದು ಅಂತ್ಯ ಸಂಸ್ಕಾರ

ಪುತ್ತೂರಿನ ವ್ಯಕ್ತಿ ಬೆಂಗಳೂರಿನಲ್ಲಿ ಕೊರೋನಾಗೆ ಬಲಿ- ಶಾಸಕರ ಸಹಾಯದಿಂದ ಪುತ್ತೂರಿಗೆ ತಂದು ಅಂತ್ಯ ಸಂಸ್ಕಾರ

- Advertisement -
- Advertisement -

ಪುತ್ತೂರು: ಬೆಂಗಳೂರಿನಲ್ಲಿ ವಾಸವಿರುವ ತಾಲೂಕಿನ ಪೆರ್ಲಂಪಾಡಿ ಮೂಲದ 56 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕೊರೋನಾದಿಂದ ಮೃತಪಟ್ಟಿದ್ದು, ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ ಮೃತದೇಹವನ್ನು ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

ಪೆರ್ಲಂಪಾಡಿವರಾಗಿದ್ದರೂ ಅವರು ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಿದ್ದರು. ಅಲ್ಲಿ ಕೋವಿಡ್ ಸೋಂಕಿತರಾದ ವ್ಯಕ್ತಿ ಎ.30 ರಂದು ಬೆಳಿಗ್ಗೆ ಸೋಂಕು ಉಲ್ಬಣಗೊಂಡು ಮೃತಪಟ್ಟಿದ್ದರು. ಬಳಿಕ ಬೆಂಗಳೂರಿನಲ್ಲಿ ಅಂತ್ಯಸಂಸ್ಕಾರ ಮಾಡಲು ತಕ್ಷಣ ವ್ಯವಸ್ಥೆ ಇಲ್ಲದ ಹಿನ್ನಲೆಯಲ್ಲಿ ಮೃತದೇಹವನ್ನು ಪುತ್ತೂರಿಗೆ ತಂದು ಶಾಸಕರ ವಾರ್ ರೂಮ್ ಸಹಾಯದೊಂದಿಗೆ ಮೃತರ ಮಕ್ಕಳು ಮತ್ತು ಸಂಬಂಧಿಕರು ಕೋವಿಡ್ ಮಾರ್ಗಸೂಚಿಯಂತೆ ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನಡೆಸಿದರು.

ಶಾಸಕರ ವಾರ್ ರೂಮ್ ನ ತುರ್ತು ಸೇವಾ ವಿಭಾಗದ ಪಿ ಜಿ ಜಗನಿವಾಸ ರಾವ್, ನಗರಸಭಾ ಸದಸ್ಯ ನವೀನ್ ಪೆರಿಯತ್ತೋಡಿ ಮತ್ತಿತರರು ಸಹಕರಿಸಿದರು.

- Advertisement -
- Advertisment -

Latest News

error: Content is protected !!